ಭಾರಿ ಶಬ್ದದ ಅಧ್ಯಯನ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ: ಸಚಿವೆ ಶಶಿಕಲಾ ಜೊಲ್ಲೆ

ಭಾನುವಾರ, 5 ಸೆಪ್ಟಂಬರ್ 2021 (20:26 IST)
ಬೆಂಗಳೂರು: ವಿಜಯಪುರ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶನಿವಾರ ತಡ ರಾತ್ರಿ ಕೇಳಿ ಬಂದಿರುವ ಶಬ್ದದ ಬಗ್ಗೆ ಸೂಕ್ತ ಅಧ್ಯಯನ ನಡೆಸುವ ವರದಿ ಭೂರ್ಗರ್ಭ ಶಾಸ್ತ್ರಜ್ಞರಿಗೆ, ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ವಿಪತ್ತು ನಿರ್ವಹಣಾ ಘಟಕಕ್ಕೆ ಸೂಚನೆ ನೀಡಲಾಗಿದೆ
 
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುವ ಜೊಲ್ಲೆ, ಶನಿವಾರ ರಾತ್ರಿ 11.47 ಗಂಟೆಯ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಾಳಿಕೋಟೆ, ಮುದ್ದೇಬಿಹಾಳ ಕೆಲವು ಕಡೆಗಳಲ್ಲಿ ಭೂಕಂಪನ ಮಾದರಿಯಲ್ಲಿ ದೊಡ್ಡ ಶಬ್ದ ಕೇಳಿದ ಭಯಭೀತರಾದ ಜನರ ಮನೆಯಿಂದ ಹೊರಗೆ ಬಂದು ಕುಳಿತಿರುವ ಬಗ್ಗೆ ವಿಜಯಪುರ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಸಿಬ್ಬಂದಿ ಮಾಡಿ ಚರ್ಚಿಸಲಾಗಿದೆ, ಯಾವ ರೀತಿಯ ಪ್ರಾಣಿ ಹಾನಿಯಾಗದಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.
 
ಭಾರೀ ಶಬ್ದದಿಂದ ಜನರು ಭಯಭೀತರಾಗುವುದು ಬೇಡ ಸರ್ಕಾರವಾಗಿದೆ ಜಿಲ್ಲಾಡಳಿತ ಮತ್ತು ಎಲ್ಲಾ ತಾಲೂಕು ಅಧಿಕಾರಿಗಳಿಗೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ರೀತಿಯ ಆತಂಕ ಪಡುವ ಅಗತ್ಯತೆ ಇಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತ ಜನರ ರಕ್ಷಣೆಗೆ ಸರ್ವ ಸನ್ನದ್ಧವಾಗಿದೆ ಎಂದು ಶಶಿಕಲಾ ಜೊಲ್ಲೆ ಪ್ರಕಟಣೆಯಲ್ಲಿ ಆಶ್ವಾಸನೆ ಉಂಟಾಗುತ್ತದೆ.
ಕೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ