ಮೈಸೂರು ಕೋರ್ಟ್‌ ಶೌಚಾಲಯದಲ್ಲಿ ನಿಗೂಢ ಸ್ಫೋಟ

ಸೋಮವಾರ, 1 ಆಗಸ್ಟ್ 2016 (17:34 IST)
ಮೈಸೂರು ಕೋರ್ಟ್‌ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಕಟ್ಟಡ ಸಂಪೂರ್ಣ ಹಾಳಾಗಿದೆ ಎಂದು ಹೇಳಲಾಗುತ್ತಿದೆ.
 
ಮೈಸೂರು ಕೋರ್ಟ್‌‌ನಲ್ಲಿ ಕಕ್ಷಿದಾರರು ಬಳಸುವ ಶೌಚಾಲಯದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಇನ್ನೂ ಎರಡು ಅನುಮಾನಾಸ್ವದ ಪೊಟ್ಟಣಗಳು ಪತ್ತೆಯಾಗಿದ್ದು, ಸ್ಪೋಟಕ ಸಾಮಾಗ್ರಿಗಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
 
ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ಅನುಮಾನಸ್ವದವಾಗಿ ಓಡಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಥಳದಲ್ಲಿ ತಾಮ್ರದ ತಗಡಿನ ರೀತಿಯ ವಸ್ತು ಹಾಗೂ ಎಲೆಕ್ಟ್ರಾನಿಕ ವಸ್ತುಗಳು ಪತ್ತೆಯಾಗಿವೆ.
 
ಘಟನೆಯಲ್ಲಿ ಶೌಚಾಲಯದ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದೆ. ಜೊತೆಗೆ ಒಂದು ಕಾರು ಜಖಂಗೊಂಡಿದ್ದು, 6 ರಿಂದ 7 ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು ಸ್ಫೋಟದ ಹಿಂದಿರುವ ಕಾರಣ ಕುರಿತಂತೆ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ