‘ರಂಜಾನ್ ಮುಗಿಯೋವರೆಗೂ ಲಾಕ್ ಡೌನ್ ವಿಸ್ತರಿಸಿ ಎಂದ ಕ್ವಾಜಿ’
ರಂಜಾನ್ ತಿಂಗಳು ಮುಗಿಯೋವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಉಡುಪಿ ಕ್ವಾಜಿ ಅಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ಈದ್ ವೇಳೆ ಲಾಕ್ ಡೌನ್ ಸಡಿಲಿಕೆ ಮಾಡಿದರೆ ಕೊರೊನಾ ವೈರಸ್ ರೋಗಿಗಳ ಸಂಖ್ಯೆ ಹೆಚ್ಚಾಗಬಹುದು. ಮಾರುಕಟ್ಟೆಗೆ ಬಹಳಷ್ಟು ಜನರು ಖರೀದಿಗೆ ಮುಂದಾಗುವುದರಿಂದಾಗಿ ಸಾಮಾಜಿಕ ಅಂತರ ಮಾಯವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.