ಮನೆ ಬಾಗಿಲಿಗೆ ಬರಲಿದೆ ಕಣ್ಣಿನ ಚಿಕಿತ್ಸೆ ತಂಡ

geetha

ಭಾನುವಾರ, 18 ಫೆಬ್ರವರಿ 2024 (15:36 IST)
ಹಾವೇರಿ : ವೈದ್ಯಕೀಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ “ಆಶಾ ಕಿರಣ” ಯೋಜನೆಗೆ ಭಾನುವಾರ ಸಿಎಂ ಚಾಲನೆ ನೀಡಲಿದ್ದಾರೆ. ಈ ಯೋಜನೆ ಮೊದಲನೆ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಹಾಗೂ ಚಾಮರಾಜನಗರದಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಹಾಗೂ ಉತ್ತರ ಕನ್ನಡದಲ್ಲಿ ಪ್ರಾರಂಭವಾಗಲಿದೆ.  
ಕುಟುಂಬದ ಪ್ರತಿಯೊಂದು ಸದಸ್ಯರ ಕಣ್ಣಿನ ತಪಾಸಣೆ, ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆಯನ್ನು ಮನೆಬಾಗಿಲಿಗೆ ತಲುಪಿಸುವುದು ಆಶಾಕಿರಣ ಯೋಜನೆಯ ಉದ್ದೇಶವಾಗಿದೆ. 
 
ಪ್ರಾಥಮಿಕ ಹಂತದ ಸಮಸ್ಯೆಯಿರುವವರಿಗೆ ಉಚಿತ ಕನ್ನಡಕ ವಿತರಣೆ, ಕಣ್ಣಿನ ಪೊರೆಯ ಸಮಸ್ಯೆಯಿರುವವರಿಗೆ ಕ್ಯಾಟರಾಕ್ಟ್‌ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ