ಫೇಸ್‌ಬುಕ್ ಸ್ನೇಹಿತನಿಂದ ಅತ್ಯಾಚಾರ; ಮಗುವಿಗೆ ಜನ್ಮ ನೀಡಿ ಸಾವು

ಸೋಮವಾರ, 14 ನವೆಂಬರ್ 2016 (12:45 IST)
ಫೇಸ್‌ಬುಕ್ ಗೆಳೆಯನಿಂದ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯೋರ್ವಳು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೃತ ರಂಜಿತಾ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದು, ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಆಕೆಗೆ ಸಿದ್ದಾರ್ಥ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ರಂಜಿತಾ ಅವಳ ಖಾಸಗಿ ಫೋಟೋಗಳನ್ನು ಅವನ ಜತೆ ಹಂಚಿಕೊಂಡಿದ್ದಳು.  ಆದರೆ ಪ್ರೀತಿಯ ನಾಟಕವಾಡುತ್ತಿದ್ದ ಸಿದ್ದಾರ್ಥ ಆ ಪೋಟೋಗಳನ್ನು ತನ್ನ ಗೆಳೆಯ ವಿನಯ್ ಮೊಬೈಲ್‌ಗೆ ವರ್ಗಾಯಿಸಿದ್ದ. ಇಬ್ಬರು ಸೇರಿ ಆಕೆಗೆ ಬೆದರಿಕೆ ಹಾಕಿ ರಂಜಿತಾ ಮೇಲೆ ಅತ್ಯಾಚಾರ ಎಸಗಿದ್ದರು.  
 
ಸಪ್ಟೆಂಬರ್ 28ರಂದು ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
 
ಮತ್ತೀಗ ರಂಜಿತಾಳಿಗೆ ಹೆರಿಗೆಯಾಗಿದ್ದು, ಆ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅದರಲ್ಲಿ ಮೂವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. 
 

ವೆಬ್ದುನಿಯಾವನ್ನು ಓದಿ