ಬ್ಯಾಂಕ್ ನಲ್ಲಿಟ್ಟ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳುವಾಗ ನಕಲಿ!
ಬ್ಯಾಂಕ್ ಗಳಲ್ಲಿ ಅಡ್ಡವಿಟ್ಟ ಚಿನ್ನ ಬಿಡಿಸಿಕೊಳ್ಳುವಾಗ ನಕಲಿ ಆಗಿದೆ ಅಂದರೆ ನೀವು ನಂಬುತ್ತಿರಾ? ಅಂತಹ ಆಘಾತಕಾರಿ ಘಟನೆಯೊಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರೂ ಸಮೀಪದ ಹೊನ್ನಗನಹಳ್ಳಿಯ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದಿದೆ.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಡ ಇಟ್ಟಿದ್ದ ಚಿನ್ನದಲ್ಲಿ ಕೆಲ ಚಿನ್ನವನ್ನ ನಕಲಿ ಮಾಡಿ ಸಿಕ್ಕಿಬಿದ್ದಿದ್ದಾನೆ. ಜನರು ಕಷ್ಟ ಅಂತ ಕೆನರಾ ಬ್ಯಾಂಕ್ ನಲ್ಲಿ ತಮ್ಮ ಒಡವೆಗಳನ್ನ ಅಡ ಇಟ್ಟಿದ್ದರು. ಹೀಗೆ ಅಡವಿಟ್ ಚಿನ್ನಾಭರಣಗಳಿಗೆ ಬಡ್ಡಿ ಕಟ್ಟದೆ ಇರೋದನ್ನ ಬ್ಯಾಂಕ್ ನಿಯಮದಂತೆ ಹರಾಜು ಮಾಡಲಾಗುತ್ತೆ. ಈ ನಿಯಮವನ್ನ ಚನ್ನಾಗಿ ತಿಳಿದಿದ್ದ ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಅಂತಹ ಚಿನ್ನಾಭರಣಗಳನ್ನ ಬ್ಯಾಂಕ್ ಲಾಕರ್ ನಿಂದ ತಗೆದು ಆ ಜಾಗಕ್ಕೆ ಅದೇ ರೀತಿ ಇದೆ ಇರುವ ಚಿನ್ನಾಭರಣಗಳನ್ನ ತಂದು ಇಟ್ಟಿದ್ದ.
ಬ್ಯಾಂಕ್ ನಿಯಮದಂತೆ ಇಟ್ಟ ಓಡವೆಗಳಿಗೆ ಬಡ್ಡಿಯನ್ನು ಕಟ್ಟದೆ ರಿನಿವಲ್ ಮಾಡಿಕೊಳ್ಳದೆ ಇರೋ ಚಿನ್ನವನ್ನ ಹರಾಜು ಮಾಡಲಾಗುತ್ತೆ. ಅದೇ ರೀತಿ ಜುಲೈ 17 ರಂದು ಓಡವೆ ಹರಾಜು ಮಾಡಲಾಗುತಿತ್ತು. ಇದಕ್ಕೆ ಅಂತಾ ಮಂಡ್ಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮಾಕಾಂತ್ ಅವರನ್ನ ಕಳುಹಿಸಿಕೊಡಲಾಗಿರುತ್ತೆ. ಬ್ಯಾಂಕ್ ಗೆ ಬಂದ ರಮಾಕಾಂತ್ ಹಾರಜಿಗೆ ಇದ್ದ ಚಿನ್ನಾಭರಣಗಳನ್ನ ಪರೀಕ್ಷೆ ಮಾಡುತ್ತಾರೆ ಆದ್ರೆ ಅಲ್ಲಿ ಇದ್ದ ಚಿನ್ನಾಭರಣಗಳು ನಕಲಿಯಾಗಿರುತ್ತವೆ. ಒಟ್ಟು 352 ಗ್ರಾಹಕರು ಇಟ್ಟಿದ್ದ 9.5 ಕೆಜಿ ಚಿನ್ನಾಭರಣಗಳು ನಕಲಿಯಾಗಿವೆ.
ಈ ಸಂಬಂಧ ರಮಾಕಾಂತ್ ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಹಾಗೂ ಅಸಲಿ ಚಿನ್ನಾವನ್ನ ನಕಲಿ ಮಾಡಿಕೊಡುತ್ತಿದ್ದ ಗಿರವಿ ಅಂಗಡಿ ಕೆಲಸಗಾರ ರಜನೀಶ್ ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸತ್ಯ ಹೊರ ಬಂದಿದೆ. ಅನಂತ್ ನಾಗ್ ಬ್ಯಾಂಕ್ ನಲ್ಲಿದ್ದ ಓಡವೆಗಳನ್ನ ಈ ರಜನೀಶ್ ಗೆ ನೀಡಿ ಅದೇ ರೀತಿ ಇರುವ ನಕಲಿ ಓಡವೆಗಳನ್ನ ಮಾಡುವಂತೆ ಹೇಳಿ ಆ ನಕಲಿ ಓಡವೆಗಳನ್ನ ಬ್ಯಾಂಕ್ ಲಾಕರ್ ನಲ್ಲಿ ಅನಂತ್ ನಾಗ್ ಇಡುತ್ತಿದ್ದ ಎಂದು ತಿಳಿದು ಬಂದಿದೆ.