ಸಿಎಂ ಯಾರಾಗ್ತಾರೋ ಯಾರಿಗೆ ಗೊತ್ತು: ಎಚ್.ಡಿ. ಕುಮಾರಸ್ವಾಮಿ
ಬಹಳಷ್ಟು ಮಂದಿ ಸಿಎಂ ರೇಸ್ ನಲ್ಲಿ ಇದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರನ್ನ ಆಯ್ಕೆ ಮಾಡುತ್ತಾರೆ ಅಂತಾ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಎರಡು ದಿನಗಳಿಂದ ಯಾರು ಸಿಎಂ ಎಂದು ಭಾರಿ ಚರ್ಚೆ ನಡೆಯುತ್ತಿದೆ. ನರೇಂದ್ರ ಮೋದಿ ಅವರು ರಾಜ್ಯದ ಎಲ್ಲ ಮಾಹಿತಿ ಕಲೆ ಹಾಕಿದ್ದಾರೆ. ಕಳೆದ ಸರ್ಕಾರದ ನ್ಯೂನತೆ, ಒಳ್ಳೆಯ ಕೆಲಸಗಳನ್ನ ಬಗ್ಗೆ ಮಾಹಿತಿ ತೆಗೆದುಕೊಳ್ಳಲಿದ್ದಾರೆ. ಅವರ ಪಕ್ಷದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ನವರು ಒಂದು ಸಮಾಜವನ್ನ ಒಲೈಸಿಕೊಳ್ಳುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಅಂತಾ ಟವಲ್ ಹಾಸಿ ಕುಳಿತಿದ್ದರಲ್ಲ, ಅವರೇ ಹೇಳಿದ್ದಾರೆ ಈಗಿದ್ದ ಸಿಎಂ ಭ್ರಷ್ಟರು ಅಂತಾ, ಮುಂದೆ ಬರುವವರು ಹಾಗೇ ಅಂತಾ ಹೇಳಿದ್ದಾರೆ ಕಾಂಗ್ರೆಸ್ ಪಾರ್ಟಿ ರಾಜಕೀಯದ ಕುತಂತ್ರ ನಡೆಯನ್ನ ಅನುಸರಿಸುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮಾತನಾಡಿದರು.
ನಾನು ಎರಡು ಬಾರಿ ಸಿಎಂ ಆಗಿದ್ದು ಅದೃಷ್ಟದಲ್ಲೆ. ನಾನು ಎರಡು ಬಾರಿ ಸಿಎಂ ಆಗಿದ್ದು ತಾಯಿಯ ಚಾಮುಂಡೇಶ್ವರಿ ಅನುಗ್ರಹದಿಂದ. ಆರುವರೆ ಕೋಟಿ ಜನರ ಸಂಪೂರ್ಣ ಬಹುಮತದಿಂದ ನೀಡಿ ನನಗೆ ಮುಖ್ಯಮಂತ್ರಿ ಆಗಿರಲಿಲ್ಲ. ಎರಡು ಬಾರಿ ಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದ ತೃಪ್ತಿ ನನಗೆ ಇದೆ. ಬಹುಶಃ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತೆ. ನಮ್ಮ ಪಕ್ಷ ಮುಗಿದೇ ಹೋಯಿತು ಎಂಬುವವರಿಗೆ ತಾಯಿಯ ಆರ್ಶೀವಾದದಿಂದ ಅಧಿಕಾರಕ್ಕೆ ಮತ್ತೆ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.