ಸಿದ್ದು ಸಿಎಂ ಆಗ್ಬೇಕೆಂದು ಅಭಿಮಾನಿ ಹರಕೆ

ಶನಿವಾರ, 22 ಏಪ್ರಿಲ್ 2023 (17:02 IST)
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗ್ಬೇಕು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಅಂತಾ ಹಾರೈಸಿ ಗದಗದಲ್ಲಿ ಸಿದ್ದು ಅಭಿಮಾನಿಯೋರ್ವ ಒಂದು ಕ್ವಿಂಟಲ್ ಭಾರ ಹೊತ್ತು ದೀಡ್ ನಮಸ್ಕಾರ ಹಾಕಿದ್ದಾರೆ.. ಹನುಮಂತಪ್ಪ ಜಟ್ಟಿ ಸುಮಾರು ಅರ್ಧ ಕಿಲೋಮೀಟರ್​​ಗೂ ಹೆಚ್ಚು ದೀಡ್​​ ನಮಸ್ಕಾರ ಹಾಕಿದ್ದಾರೆ. ವಿರುಪಾಕ್ಷೇಶ್ವರ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ದೀಡ್​​​ ನಮಸ್ಕಾರ ಹಾಕಿದ್ದಾರೆ.. ದೀಡ್​ ನಮಸ್ಕಾರದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ