ಪ್ಯಾಂಟ್ ಕಳಚಿ ಪಂಚೆ ಹಾಕಿದ ರೈತನ ಮಗ: ಎಚ್‌ಡಿಕೆಗೆ ಡಿಕೆಶಿ ಲೇವಡಿ

Sampriya

ಭಾನುವಾರ, 4 ಆಗಸ್ಟ್ 2024 (17:54 IST)
ರಾಮನಗರ: ಮುಡಾ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಮಾಡುತ್ತಿರುವುದು ಪಾಪ ವಿಮೋಚನಾ ಪಾದಯಾತ್ರೆ. ತಮ್ಮ ಮೇಲಿನ ಪಾಪಗಳ ವಿಮೋಚನೆಗೆ ವಿಪಕ್ಷಗಳು ಈ ಪಾದಯಾತ್ರೆಯನ್ನು ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವ್ಯಂಗ್ಯ ಮಾಡಿದರು.

ಅವರು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಈ ಭಾಗದಲ್ಲಿ 6 ವರ್ಷ ಅಧಿಕಾರ ನಿರ್ವಹಿಸಿರುವ ಎಚ್ ಡಿ ಕುಮಾರಸ್ವಾಮಿ  ಅವರು  ಬಡವರಿಗೆ ಒಂದು ಜಮೀನಾಗಲಿ, ಒಂದು ಸೈಟ್ ಆಗಲಿ ಹಂಚಿಕೆ ಮಾಡಿಲ್ಲ. ನಾನು ನಡೆಸಿದ ಸಭೆಯಲ್ಲಿ ನನಗೆ 22ಸಾವಿರ ಜನ ಅರ್ಜಿ ಬಂದಿದ್ದು, ಹಾಗಾದ್ರೆ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದಲ್ಲಿ ಏನು ಕೆಲಸ ಮಾಡಿದ್ದು ಎಂದು ಪ್ರಶ್ನಿಸಿದರು.

ರೈತನ ಮಗ ಕುಮಾರಸ್ವಾಮಿ ಅವರು ಇದೀಗ ಪ್ಯಾಂಟ್ ಕಳಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆಯಿದೆ. ಹುಟ್ಟಿದ ಕರುಗಳೆಲ್ಲ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ