ವಿಷ ಸೇವಿಸಿ ಸಚಿವರೆದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ
ಅಸ್ವಸ್ಥ ರೈತನನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ರೈತ ಅಪ್ಪಾಜಿಗೌಡ ಮಂಡ್ಯದ ಮದ್ದೂರು ತಾಲೂಕಿನ ಅಂಕನಾಥಪುರದವರು ಎಂದು ತಿಳಿದುಬಂದಿದೆ. ತಮ್ಮ ಜಮೀನನ್ನ ನಾಲೆ ಕಟ್ಟಲು ವಶಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ ಎಂಬುದು ರೈತನ ಆರೋಪ.