ಸೂಪರ್ ಸಿಎಂ ತವರಲ್ಲೇ ರೈತರು ಗೋಳು ಕೆಳುತ್ತಿಲ್ಲವಂತೆ ಸರಕಾರ!

ಶನಿವಾರ, 23 ಫೆಬ್ರವರಿ 2019 (16:35 IST)
ಸಿ.ಎಂ‌ ತವರು ಜಿಲ್ಲೆಯ ರೈತರ ಗೋಳನ್ನೇ ಕೇಳುತ್ತಿಲ್ಲವಂತೆ ರಾಜ್ಯ ಸರ್ಕಾರ. ಹೀಗಂತ ಸಚಿವ ರೇವಣ್ಣ ಸ್ವಕ್ಷೇತ್ರದ ಅನ್ನದಾತರ ಅಳಲು ತೋಡಿಕೊಳ್ಳುತ್ತಿದ್ದಾರೆ.

ಹೊಳೆನರಸೀಪುರದಲ್ಲಿ ಡಿಪ್ಲೊಮಾ ಕಾಲೇಜು ಕಟ್ಟಲು ರೈತರ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 10 ವರ್ಷಗಳ ಹಿಂದೆ ಕೃಷಿ ಭೂಮಿ ಭೂಸ್ವಾಧೀನ ಪಡಿಸಿಕೊಂಡಿದ್ದ ಲೋಕಪಯೋಗಿ ಇಲಾಖೆ ಸಚಿವ ರೇವಣ್ಣ ಅವರ ತವರಲ್ಲೇ ತಮ್ಮ ಇಲಾಖೆಯಿಂದಲೇ ಬಿಡಗಡೆಯಾಗದ ಪರಿಹಾರ ಹಣದ ಕುರಿತು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಲೇಜು‌ ನಿರ್ಮಾಣಕ್ಕಾಗಿ ಸುಮಾರು 10 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆಗ ಒಂದು ಗುಂಟೆಗೆ ಕೇವಲ 3 ಸಾವಿರ ನೀಡಿ ಕೈ ತೊಳೆದುಕೊಂಡಿತ್ತು ಲೋಕಪಯೋಗಿ‌ ಇಲಾಖೆ. ಇಲಾಖೆಗೆ ಅಲೆದು ಅಲೆದು‌ ಕೋರ್ಟ್ ಮೆಟ್ಟಿಲೇರಿದ್ದರು ಹೊಳೆನರಸೀಪುರದ ರೈತರು. ರೈತರಿಗೆ ಭೂಮಿಯ ಪ್ರಸ್ತುತ ಬೆಲೆಯನುಸಾರ ಸೂಕ್ತ ಪರಿಹಾರ ‌ನೀಡುವಂತೆ 2016 ರಲ್ಲೇ ಕೋರ್ಟ ಆದೇಶ ನೀಡಿದೆ. ಒಂದು ಗುಂಟೆಗೆ 22 ಸಾವಿರ ಪರಿಹಾರ ನೀಡುವಂತೆ ಆದೇಶವನ್ನು ಕೋರ್ಟ ನೀಡಿದೆ.

ಆದರೆ ಆದೇಶ ಹೊರಡಿಸಿ ಮೂರು ವರ್ಷವಾದರೂ ರೈತರಿಗೆ ಇಲಾಖೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಪರಿಹಾರ ನೀಡದ ಲೋಕೋಪಯೋಗಿ ‌ಇಲಾಖೆಯ ಪಿಡಬ್ಲುಡಿ ಕಚೇರಿಯನ್ನು ಕೋರ್ಟ್ ಆದೇಶದನ್ವಯ ವಕೀಲರ ಮೂಲಕ ಜಪ್ತಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ