ತುಂಗಭದ್ರಾ ನದಿಯ ನೀರು ಮೇಲ್ಡಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಡಿಸೆಂಬರ್ 20 ರಿಂದ ಜನವರಿ 5 ನೀರು ಹರಿಸಲು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋಣಿ ಬಸಪ್ಪ ಒತ್ತಾಯಿಸಿದ್ದಾರೆ.
ಕಾಲುವೆಗೆ ನೀರು ಹರಿಸಿದಿದ್ದಲ್ಲಿ ಈ ಭಾಗದ 50 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಸಂಪೂರ್ಣವಾಗಿ ಬೆಳೆನಷ್ಟವಾಗಲಿದೆ. ಜಿಲ್ಲೆಯಲ್ಲಿ ಭಾರೀ ಮರಳು ಮಾಫಿಯಾದಿಂದ ಬಡಜನತೆ ಮನೆ ನಿರ್ಮಾಣ ಮಾಡದಂತಹ ಪರಿಸ್ಧಿತಿಯಾಗಿದೆ. ಉಚಿತವಾಗಿ ನೀರು ಬಳಕೆ ಮಾಡಿಕೊಳ್ಳುದಲ್ಲದೆ ಸರಕಾರಕ್ಕೆ 300 ಕೋಟಿ ರೂ.ಗಳಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಾಲವನ್ನು ಸರಕಾರ ಸಂಪೂರ್ಣ ವಾಗಿ ಮನ್ನಾ ಮಾಡಬೇಕು. ಜಿಲ್ಲಾಡಳಿತವೇ ಕಬ್ಬಿನ ರಿಕವರಿ ಮಾಡಲು ಸಮಿತಿಯನ್ನು ರಚನೆ ಮಾಡುವುದಲ್ಲದೇ ಸರಕಾರ ನಿಗದಿಯಂತೆ ಕಬ್ಬಿನ ಬೆಲೆ ನೀಡಲು ಕಾರ್ಖಾನೆ ಮಾಲೀಕರು ಮುಂದಾಗುವಂತೆ ಒತ್ತಾಯಿಸಿದರು.