ರೈತರ ಸಾಲ ಮನ್ನಾ: ಸಿಎಂಗೆ ರೈತ ಮುಖಂಡ ಪುಟ್ಟಣ್ಣಯ್ಯ ಅಭಿನಂದನೆ

ಬುಧವಾರ, 21 ಜೂನ್ 2017 (14:30 IST)
ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರ ರೂಪಾಯಿಗಳವರೆಗಿನ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ ಎಂದು ರೈತ ಸಂಘದ ಮುಖಂಡ ಶಾಸಕ ಪುಟ್ಟಣ್ಣಯ್ಯ ಅಭಿನಂದಿಸಿದ್ದಾರೆ.
 
ರಾಜ್ಯದ ಸಹಕಾರ ಸಂಘಗಳಲ್ಲಿ ರೈತರ ಸಾಲ 10 ಸಾವಿರ ಕೋಟಿ ರೂಪಾಯಿಗಳಿದ್ದು, 8165 ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲಾಗಿದೆ. ಇದರಿಂದ ರೈತರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
 
ರಾಜ್ಯ ಸರಕಾರ ಸಂಪೂರ್ಣ ರೈತರ ಸಾಲ ಮನ್ನಾ ಘೋಷಿಸಬೇಕಾಗಿತ್ತು. ಆದರೆ, ಮುಖ್ಯಮಂತ್ರಿಯವರು ತಮ್ಮ ಇತಿ ಮಿತಿಯಲ್ಲಿ ಸಾಲ ಮನ್ನಾ ಘೋಷಿಸಿದ್ದಾರೆ. ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ರಾಜ್ಯ ಸರಕಾರ ಸಾಲ ಮನ್ನಾ ಘೋಷಿಸಿದೆ, ಇದೀಗ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಘೋಷಿಸಬೇಕು. ರಾಜ್ಯದ ಬಿಜೆಪಿ  ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಾ ಮಾಡಿಸಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಅಷ್ಚಟು ಸೀಟು ಗೆಲ್ಲುತ್ತೇವೆ. ಇಷ್ಟು ಸೀಟು ಗೆಲ್ಲುತ್ತೇವೆ ಎನ್ನುವುದು ಭ್ರಮೆಯಾಗುತ್ತದೆ ಎಂದು ಶಾಸಕ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.  
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ