ಖನಿಜ ಭವನಕ್ಕೆ ದೇವನಹಳ್ಳಿ ಭಾಗದ ರೈತರು ಮುತ್ತಿಗೆ

ಗುರುವಾರ, 16 ಜೂನ್ 2022 (20:34 IST)
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವಕ್ಕೆ ದೇವನಹಳ್ಳಿ ಭಾಗದ ರೈತರು ಮುತ್ತಿಗೆ ಹಾಕಿ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಕೈಗಾರಿಕೆಗಾಗಿ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿರುವ ಕೆಐಎಡಿಬಿ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ  ಜಮೀನಿಗೆ ಪರಿಹಾರ ಕೊಡಬೇಕು,ಭೂಮಿ ಕಳೆದುಕೊಂಡವರಿಗೆ ಉದ್ಯೋಗವಕಾಶ ನೀಡಬೇಕು, ದೇವನಹಳ್ಳಿ ಭಾಗದ ಕೆಲವು ಜಾಗಗಳು ಈಗಾಗಲೇ ಕೈಗಾರಿಕೆಗೆ ಹೋಗಿದೆ, ಭೂಮಿ ಖರೀದಿಸಲು 2ನೇ ಫೇಸ್ ಸರ್ಕಾರ ಶುರು ಮಾಡುತ್ತಿದೆ,ಸರ್ಕಾರ ಬೇಗ ಏನಾದ್ರೂ ತೀರ್ಮಾನ  ತೆಗೆದುಕೊಳ್ಳಬೇಕು ಆಗ ರೈತರ ಲ್ಯಾಂಡ್ ಟ್ರಾನ್ಸಕ್ಷನ್ಗೆ ಅವಕಾಶ ಸಿಗುತ್ತದೆ, ಮಾರಬೇಕಾ,ಅಥವಾ ಇರುವ ಭೂಮಿಯಲ್ಲೆ ಉಳುವೆ ಶುರು ಮಾಡಬೇಕಾ ಎಂಬ ಗೊಂದಲದಲ್ಲಿದ್ದಾರೆ.ಸರ್ಕಾರ ಸೂಕ್ತವಾದ ಬೆಲೆ ಕೊಡಬೇಕು,ಎಂದು ಕೈಗಾರಿಗಾ ಸಚಿವರಿಗೆ ಮನವಿ ಮಾಡಲು ಬಂದಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನಾಗಾರಾಜ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ