ಕುಂದಾನಗರಿಯಲ್ಲಿ ರೈತರ ಪ್ರತಿಭಟನೆ

ಗುರುವಾರ, 15 ನವೆಂಬರ್ 2018 (17:41 IST)
ಕಬ್ಬು ಬೆಳೆದ ರೈತರಿಂದ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಕುಂದಾನಗರಿಯಲ್ಲಿ ಪ್ರತಿಭಟನೆ ನಡೆಯಿತು.

ರೈತ ಮುಖಂಡ ಕುರುಬುರು ಶಾಂತಕುಮಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ನೀಡಬೇಕು. ಪ್ರಸಕ್ತ ವರ್ಷ ಹಂಗಾಮಿನ ದರ ನಿಗದಿ ಮಾಡಬೇಕು. ಕೇಂದ್ರ ಸರ್ಕಾರದ ಎಫ.ಆರ.ಪಿ ದರ ಘೋಷಿಸಬೇಕು. ಪ್ರತಿ ಟನ್ ಗೆ ಎಫ.ಆರ.ಪಿ ಪ್ರಕಾರ ಶೇ.10 ರಿಕವರಿಗೆ 2775 ರುಪಾಯಿ ನೀಡಲು ಆಗ್ರಹ ಮಾಡಿದರು.

ಬೆಳಗಾವಿ ಡಿಸಿ, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ರೈತರ ಹೋರಾಟಕ್ಕೆ ರಾಜಕೀಯ ಪಕ್ಷ ಮುಖಂಡರು ಸಾಥ್ ನೀಡಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಸ್ಥಳೀಯ ನಾಯಕರ ಬೆಂಬಲ ದೊರೆಯಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ