ಕಬ್ಬಿಗೆ ಎಫ್ ಆರ್ ಪಿ ದರ ನೀಡುವಂತೆ ಒತ್ತಾಯ
ಕಬ್ಬಿಗೆ ಎಫ್ ಆರ್ ಪಿ ದರ ನೀಡುವಂತೆ ಒತ್ತಾಯಿಸಿ ಸ್ವಾಭಿಮಾನಿ ಶೇತ್ಕರಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಕ್ಕದ ಮಹಾರಾಷ್ಟ್ರದಲ್ಲಿ ಎಫ್ ಆರ್ ಫಿ ದರದಂತೆ ಕಬ್ಬು ಬೆಳೆಗಾರರಿಗೆ ಬೆಲೆ ನೀಡುತ್ತದೆ. ಆದರೆ ರಾಜ್ಯದಲ್ಲಿನ ಕಾರಖಾನೆಗಳು ಸರಕಾರ ನಿಗದಿಪಡಿಸಿದ ದರ ನೀಡುತ್ತಿಲ್ಲ ಎಂದು ಕಾರಖಾನೆಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಸವ ಸರ್ಕಲನಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಎಫ್ ಆರ್ ಫಿ ಎ ಫ್ ದರ ನೀಡುವಂತೆ ಒತ್ತಾಯಿಸಿದರು. ಫಿ ಎ ಫ್ ದರ ನೀಡದೆ ಹೋದರೆ ಉಗ್ರವಾದ ಹೋರಾಟ ಮಾಡುವದಾಗಿ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ದರ ನೀಡದೆ ಹೋದರೆ ಉಗ್ರವಾದ ಹೋರಾಟ ಮಾಡುವದಾಗಿ ಅವರು ಎಚ್ಚರಿಸಿದರು. ದರ ನೀಡುವವರಿಗೆ ಕಾರಖಾನೆ ಕಬ್ಬು ನುರಿಸಲು ಬಿಡುವದಿಲ್ಲ ಎಂದೂ ಹೇಳಿದರು.