ದಸರಾ ಹಬ್ಬದಂದೆ ಪ್ರತಿಭಟನೆಗೆ ಮುಂದಾದ ರೈತರು !

ಮಂಗಳವಾರ, 24 ಅಕ್ಟೋಬರ್ 2023 (13:03 IST)
ರಾಜ್ಯಸರ್ಕಾರದ ಇಬ್ಬಗೆ ನೀತಿ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಗೆ ಕರೆನೀಡಲಾಗಿದೆ.ರೈತ ಸಂಘಟನೆ ಮುಖಂಡ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದ್ದು,ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ‌ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ.ರೈತರಿಗೊಂದು ನ್ಯಾಯ ಕೈಗಾರಿಗೆಗಳಿಗೊಂದು ನ್ಯಾಯ ಎಂದು ಆರೋಪ ಮಾಡಿ ರೈತರಿಗೆ 5ಗಂಟೆ ವಿದ್ಯುತ್ ಕೈಗಾರಿಕಗಳಿಗೆ ಹತ್ತು ಗಂಟೆ ವಿದ್ಯುತ್  ಕೊಡಲಾಗ್ತಿದೆ.
 
ಬರಗಾಲ ಹಿನ್ನೆಲೆ ಸರಳ‌ ದಸರ ಆಚರಿಸೊದಾಗಿ ಸರ್ಕಾರ ಹೇಳಿದ್ದ ಇದೀಗ ಅದ್ದೂರಿ ದಸರಾ ಆಚರಿಸ್ತಿದೆ .ಬರಗಾಲದಲ್ಲೂ ಮೋಜಿನ ದಸರಾ ಬೇಕಿತ್ತಾ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.ಹೀಗಾಗಿ ರಾಜ್ಯವ್ಯಾಪಿ ರಸ್ತೆತೆಡೆದು ಪ್ರತಿಭಟನೆ ಮಾಡಲು ರೈತರು ತೀರ್ಮಾನ  ಮಾಡಿದ್ದು,ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಬೇಕು .ಬೆಳಗಿನ ಸಮಯದಲ್ಲೇ ರೈತರಿಗೆ ಕನಿಷ್ಠ 10 ಗಂಟೆ ವಿದ್ಯುತ್ ಕೊಡಬೇಕು.ಕಬ್ಬಿನ ಎಫ್ ಆರ್ ಪಿ ದರ  ಹೆಚ್ಚಳಕ್ಕೆ ಆಗ್ರಹಿಸಿ ಬರಪೀಡಿತ 225 ತಾಲ್ಲೂಕಿನಲ್ಲಿ ಶೀಘ್ರವಾಗಿ ರೈತರಿಗೆ ಪರಿಹಾರ ನೀಡಬೇಕು  .ನೀರಿಲ್ಲದೇ ಬೆಳೆ ಬೆಳೆಯದೇ ಇರುವ ರೈತರಿಗೂ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ