ಇಂದು ಇಡಿ ಕಚೇರಿಯಲ್ಲಿ ತಂದೆ-ಮಗಳ ವಿಚಾರಣೆ

ಗುರುವಾರ, 12 ಸೆಪ್ಟಂಬರ್ 2019 (10:35 IST)
ನವದೆಹಲಿ : ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಸೆ. 12 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ  ಐಶ್ವರ್ಯ ಅವರು ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.
ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಬಳಿಕ ಡಿಕೆಶಿ ಪುತ್ರಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದ್ದಾರೆ. ನಂತರ ಡಿಕೆಶಿ ಎದುರು ಪುತ್ರಿಯನ್ನು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.


ಈಗಾಗಲೇ ಐಶ್ವರ್ಯ ಅವರು ವಕೀಲರು ಹಾಗೂ ಸಂಸದ ಡಿ.ಕೆ.ಸುರೇಶ್ ಜೊತೆ ಚರ್ಚೆ ನಡೆಸಿದ್ದು, ಇಂದು ವಿಚಾರಣೆ ವೇಳೆ ಐಶ್ವರ್ಯ ಸರಿಯಾದ ವಿವರ ಕೊಡದಿದ್ದರೆ, ಶುಕ್ರವಾರವೂ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸಮನ್ಸ್ ನೀಡುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ