ಶಾಸಕ ಇಕ್ಬಾಲ್ ನನ್ನ ನಡುವೆ ತಂದೆ-ಮಗಳ ಸಂಬಂಧ: ಅಶ್ಲೀಲ ವಿಡಿಯೋ ಬಗ್ಗೆ ಯುವತಿ ದೂರು
ಯುವತಿ ನೀಡಿದ ದೂರಿನಲ್ಲಿ ಹೀಗಿದೆ: ಶಾಸಕ ಇಕ್ಬಾಲ್ ಹುಸೇನ್ ಮತ್ತು ನನ್ನ ನಡುವಿನ ಸಂಬಂಧ ತಂದೆ, ಮಗಳ ಸಂಬಂಧವಾಗಿದೆ. ಇಕ್ಬಾಲ್ ಅವರು ನನ್ನ ಜತೆಯಾಗಲಿ, ಬೇರೆಯವರ ಜತೆಯಾಗಲಿ ಅವರು ಅಸಭ್ಯವಾಗಿ ವರ್ತಿಸಲ್ಲ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ.
ಇನ್ನೂ ವಿಡಿಯೋದಲ್ಲಿ ನಾನು ಶಾಸಕರೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವಂತೆ ಅಶ್ಲೀಲ ವಿಡಿಯೋ ಸೃಷ್ಟಿಸಲಾಗಿದೆ. ತಮ್ಮಣ್ಣಗೌಡ ಗುಂಡ್ಕಲ್ ಎಂಬುವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅದನ್ನು ಹಂಚಿಕೊಂಡು ನನ್ನ ಮಾನಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.