ರೇಪಿಸ್ಟ್‌ ಪ್ರಜ್ವಲ್‌ ರೇವಣ್ಣ ಪರ ಮತಯಾಚಿಸಿದ ಮೋದಿ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ ಒತ್ತಾಯ

Sampriya

ಗುರುವಾರ, 2 ಮೇ 2024 (18:01 IST)
Photo Courtesy X
ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಅವರಂತಹ ಸಾಮೂಹಿಕ ಅತ್ಯಾಚಾರಿಯನ್ನು ಬೆಂಬಲಿಸಿ ಮತ ಯಾಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಮತ್ತು ವಿಶೇಷವಾಗಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್ ಪರ ಮತಯಾಚನೆ ಮಾಡಿದ ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದದರು.

"ಹಾಸನ‌ ಸಂಸದ, ಹಾಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದು ಬರೀ‌ ಲೈಂಗಿಕ ಹಗರಣ ಅಲ್ಲ. 'ಸಾಮೂಹಿಕ‌ ಅತ್ಯಾಚಾರ'," ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ಹೊರಹಾಕಿದರು.

ಕರ್ನಾಟಕದಲ್ಲಿ ಇಂತಹ ಅತ್ಯಾಚಾರಿಗೆ ಮತದಾನ ಮಾಡಿದರೆ‌ ನನಗೆ ಮತ ನೀಡಿದಂತೆ ಎಂದು ಪ್ರಧಾನಿ ನರೇಂದ್ರ ಮೋದಿ‌ ಪ್ರಚಾರ ಮಾಡಿದ್ದಾರೆ. ಮುಂಚೆಯೇ ಲೈಂಗಿಕ ಹಗರಣದ ಬಗ್ಗೆ ಮಾಹಿತಿ‌‌ ಇದ್ದರೂ‌ ಮೋದಿ ಪ್ರಜ್ವಲ್‌ ಪ್ರಚಾರ ಮಾಡಿ‌ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮೂಹಿ‌ಕ ಅತ್ಯಾಚಾರಿಯ ಪರ ವಹಿಸಿಕೊಂಡಿದ್ದರಿಂದ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ನರೇಂದ್ರ‌‌ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖರು ಕೃತ್ಯಕ್ಕಾಗಿ ದೇಶದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ರಾಹುಲ್‌ ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣರಂತಹ ಪೆನ್‌ಡ್ರೈವ್ ಪ್ರಕರಣ ಘಟನೆ ಹಿಂದೆಂದೂ ನಡೆದಿಲ್ಲ. ಪ್ರಧಾನಿ ಅವರು ಸಾಮೂಹಿಕ ಅತ್ಯಾಚಾರಿಯನ್ನು ಬೆಂಬಲಿಸಿದ್ದಾರೆ. ಇದೇ ಬಿಜೆಪಿಯ ಮಾನಸಿಕತೆಯಾಗಿದೆ. ಅಧಿಕಾರ ಪಡೆಯಲು ಅವರು‌ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ