ಪೊಲೀಸರಿಗೆ ಶುರುವಾಗಿದೆ ಭೀತಿ : ಸ್ವಯಂ ನಿವೃತ್ತಿ ಹಾದಿ ಹಿಡಿದ ಅಧಿಕಾರಿಗಳು

ಶನಿವಾರ, 12 ಅಕ್ಟೋಬರ್ 2019 (15:07 IST)
ಪೊಲೀಸ್ ಹಾಗೂ ಅಧಿಕಾರಿಗಳ ಮೇಲೆ ಸೇವಾ ನಿರ್ಲಕ್ಷ್ಯ, ಅಪರಾಧ ಚಟುವಟಿಕೆ, ಅಕ್ರಮ ದಂಗೆ ತಡೆಯಲು ವಿಫಲವಾದವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಕೆಲವು ಪೊಲೀಸ್ ಅಧಿಕಾರಿಗಳ ನಿದ್ದೆಗೆಡಿಸಿದೆ.

ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಅಪರಾಧ ಚಟುವಟಿಕೆ ಹಾಗೂ ಅಕ್ರಮ ದಂಗೆಗಳನ್ನು ತಡೆಗಟ್ಟಲು ಅಧಿಕಾರಿಗಳ ಮೇಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದ ಹಿರಿಯ ಅಧಿಕಾರಿಯೊಬ್ಬರು ಹೆದರಿ ಸ್ವಯಂ ನಿವೃತ್ತಿ ಪಡೆಯಲು ಚಡಪಡಿಸುತ್ತಿದ್ದಾರೆ ಎಂಬ ಮಾತುಗಳು ಹೇಳಿ ಬರುತ್ತಿವೆ‌.

ಇನ್ನು ಕೆಲವು ಪೊಲೀಸರು ಇದೇ ದಾರಿ ತುಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಇದೇ ಅಧಿಕಾರಿವನ್ನು ವರ್ಗಾವಣೆಗೊಳಿಸಿದಾಗ ಕೆಎಟಿ ಮೊರೆ ಹೋಗಿ ಮರಳಿ ತಮ್ಮ ಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.

ಆದರೆ ಆಗ ಆಯುಕ್ತ ಆರ್.ದಿಲೀಪ್ ಅವರು ಅವಳಿನಗರದಲ್ಲಿ ಅಕ್ರಮ ದಂಧೆ, ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರಿಂದ ಹಾಗೂ ಇಂತಹ ಚಟುವಟಿಕೆಗಳು ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸುತ್ತಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವುದರಿಂದ ಬೆದರಿದ ಅಧಿಕಾರಿಯೊಬ್ಬರು ಈಗ ಸ್ವಯಂ ನಿವೃತ್ತಿ ಬೇಕೆಂದು ಮೇಲಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ