ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಪೀಠಾಧಿಪತಿ ನಿರ್ಮಲಾನಂದಶ್ರೀ ನೇತೃತ್ವದಲ್ಲಿ ಉರಿಗದ್ದುಗೆ ಜ್ವಾಲಾಪೀಠೋಹರಣ ನಡೆಯಿತು. ಆದ್ರೆ ಇದ್ರಲ್ಲಿ ಪಾಲ್ಗೊಳ್ಳಬೇಕಾಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೈರಾಗಿದ್ರು.
ಮಂಡ್ಯ ಜಿಲ್ಲೆಯ ನಾಗಮಂಗಲದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಪೀಠಾಧಿಪತಿ ನಿರ್ಮಲಾನಂದಶ್ರೀ ನೇತೃತ್ವದಲ್ಲಿ ಉರಿಗದ್ದುಗೆ ಜ್ವಾಲಾಪೀಠೋಹರಣ ನಡೆಯಿತು. ಆದ್ರೆ ಇದ್ರಲ್ಲಿ ಪಾಲ್ಗೊಳ್ಳಬೇಕಾಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೈರಾಗಿದ್ರು.
ಆದಿಚುಂಚನಗಿರಿಯ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ವರ್ಷಕ್ಕೆ ಮೂರು ಬಾರಿ ನಡೆಯುವ ಜ್ವಾಲಾಪೀಠೋಹರಣ ಈ ಬಾರಿ ಯಶಸ್ವಿಯಾಗಿ ನಡೆಯಿತು. ಅದ್ರಲ್ಲೂ ಆಯುಧ ಪೂಜೆ ದಿನ ನಡೆಯುವ ಪೀಠಾರೋಹಣ ವಿಶೇಷತೆಯಿಂದ ಕೂಡಿರೋದ್ರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವ್ರು ಭಾಗಿಯಾಗಬೇಕಿತ್ತು. ಆದ್ರೆ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ ಸಿಎಂ ಕುಮಾರಸ್ವಾಮಿ ಗೈರಾಗಿ ಮೈಸೂರಿನಲ್ಲೇ ವಿಶ್ರಾಂತಿ ಪಡೆದ್ರು. ಈ ನಿಟ್ಟಿನಲ್ಲಿ ಸಿಎಂ ಪರವಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಪಾಲ್ಗೊಂಡಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ಸಿಎಂ ಅವ್ರೇ ಇಲ್ಲಿ ಭಾಗವಹಿಸಬೇಕಿತ್ತು. ಆದ್ರೆ ಅನಿವಾರ್ಯ ಕಾರಣಗಳಿಂದ ಅವ್ರು ಭಾಗವಹಿಸಿಲ್ಲ ಎಂದ್ರು. ಇನ್ನು ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ದೋಸ್ತಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಗೆಲ್ಲಲಿದ್ದಾರೆ ಎಂದು ಹೇಳಿದ್ರು.