ಸಮನ್ವಯ ಸಮಿತಿ ರಚನೆಗೆ ಮೂಲ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ

ಮಂಗಳವಾರ, 21 ಜನವರಿ 2020 (09:50 IST)
ಬೆಂಗಳೂರು : ಸಮನ್ವಯ ಸಮಿತಿ ರಚಿಸುವ ಪ್ರಸ್ತಾಪಕ್ಕೆ ಮೂಲ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.



ಪಕ್ಷದಲ್ಲಿ ಯಾರನ್ನ ನಿಯಂತ್ರಿಸಲು ಈ ಸಮಿತಿ ಬೇಕು? ಪಕ್ಷದ ಚಟುವಟಿಕೆಗಳನ್ನ ಯಾರು ಸಮನ್ವಯ ಮಾಡ್ಬೇಕು? ಈ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ಬೆಲೆ ಇಲ್ಲವಾಗುತ್ತೆ. ಸಮನ್ವಯ ಸಮಿತಿ, ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕ , ವಿಪಕ್ಷ ನಾಯಕರ ನಡುವೆಯೇ ಗೊಂದಲ ಏರ್ಪಡುತ್ತದೆ ಎಂದು  ಮೂಲ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಸಮನ್ವಯ ಸಮಿತಿ ಕೆಪಿಸಿಸಿ ಅಧ್ಯಕ್ಷರ ನಿರ್ಧಾರ ಪ್ರಶ್ನಿಸಿದ್ರೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಏನು ಗೌರವ ಉಳಿಯುತ್ತದೆ. ಇದರಿಂದ ವೈಯಕ್ತಿಕ ಕಿತ್ತಾಟವು ಸಹ ಶುರುವಾಗಬಹುದು. ಮೈತ್ರಿ ಸರ್ಕಾರವಿದ್ದಾಗ ಸಮನ್ವಯ ಸಮಿತಿ ಅಗತ್ಯತೆ ಇತ್ತು. ಈಗ ಅದರ ಅವಶ್ಯಕತೆ ಇಲ್ಲವೆಂದ ಮೂಲ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ