ಮಸಾಜ್ ಪಾರ್ಲರ್ನಲ್ಲಿ ಮಹಿಳೆಯ ಅರೆನಗ್ನ ದೃಶ್ಯ ಚಿತ್ರೀಕರಣ: ಆರೋಪಿ ಆರೆಸ್ಟ್
ಬುಧವಾರ, 24 ಮೇ 2017 (12:32 IST)
ನಗರದ ಶ್ರೀ ಸಾಯಿ ಆಯರ್ವೇದಿಕ ಮಸಾಜ್ ಸೆಂಟರ್ನಲ್ಲಿ ಮಸಾಜ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಅರೆನಗ್ನ ದೇಹದ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ಮಹಿಳೆ ಮಸಾಜ್ ಮಾಡಿಕೊಳ್ಳುತ್ತಿರುವುದನ್ನು ಕರ್ಟನ್ನಲ್ಲಿ ಕ್ಯಾಮರಾ ಸಿಕ್ಕಿಸಿ ದೃಶ್ಯವನ್ನು ಚಿತ್ರಿಕರಿಸಿಕೊಳ್ಳಲಾಗುತ್ತಿತ್ತು. ಅನುಮಾನಗೊಂಡ ಮಹಿಳೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಕರ್ಟನ್ ಇರೋದೆ ಹಾಗೇ ಎಂದು ಮಸಾಜ್ ಪಾರ್ಲರ್ ಸಿಬ್ಬಂದಿ ಯಾಮಾರಿಸಲು ಯತ್ನಿಸಿದ್ದಾರೆ.
ಮಹಿಳೆ, ಕರ್ಟನ್ ತಿರುಗಿಸಿ ನೋಡಿದಾಗ ಕರ್ಟನ್ನಲ್ಲಿ ಕ್ಯಾಮರಾ ಅಳವಡಿಸಿರುವುದು ಪತ್ತೆಯಾಗಿದೆ. ಕೂಡಲೇ ಯಲಹಂಕ ಪೊಲೀಸ್ ಠಾಣೆಗೆ ತೆರಳಿ ಮಸಾಜ್ ಪಾರ್ಲರ್ ವಿರುದ್ಧ ದೂರು ನೀಡಿದ್ದಾಳೆ.
ದೂರು ದಾಖಲಿಸಿಕೊಂಡ ಪೊಲೀಸರು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದಾಗ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಮಸಾಜ್ ಪಾರ್ಲರ್ಗೆ ಬೀಗ ಜಡಿದು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.