ಕಾಂಗ್ರೆಸ್ ನಿಂದ ಮಹಾನ್ ಯೋಧನಿಗೆ ಅಂತಿಮ ನಮನ

ಗುರುವಾರ, 9 ಡಿಸೆಂಬರ್ 2021 (20:16 IST)
ಭಾರತೀಯ ಸೇನೆಯ ಪರಮೋಚ್ಚ ಅಧಿಕಾರಿ ಸಿಡಿಎಸ್ ಬಿಪಿನ್ ರಾವತ್ ರವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರಾ ಮೈನಾ ರವರು ಭಾರತಾಂಬೆಯ ಸುಪುತ್ರ ,ಅಪ್ರತಿಮ ಯೋಧ  ಬಿಪಿನ್ ರಾವತ್ ರವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು .ಅವರ 40 ವರ್ಷಗಳ ಸೇನೆಯಲ್ಲಿ ನಿಸ್ವಾರ್ಥ ಸೇವೆ ಎಲ್ಲಾ ಭಾರತೀಯರಿಗೆ ಆದರ್ಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮಾಜಿ ಮೂಡ ಅಧ್ಯಕ್ಷರಾದ ಚುಮ್ಮಿದೇವಯ್ಯ ನವರು ಮಾತನಾಡಿ ಭಾರತೀಯ ಸೇನೆ ಬಿಪಿನ್ ರಾವತ್ ರವರ ಅಗಲಿಕೆಯಿಂದ ಅಪಾರ ನಷ್ಟ ಅನುಭವಿಸಿದ್ದು ಅವರ ಸೇವೆ ಚಿರಸ್ಥಾಯಿಯಾಗಿ ಉಳಿದಿದೆ ಎಂದರು .
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷರಾದ  ರಾಜೇಶ್ ಯಲ್ಲಪ್ಪ ನವರು ಬಿಪಿನ್ ರಾವತ್ ರವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಪ್ರತಿಯೊಬ್ಬ ಭಾರತೀಯನಿಗೆ ನೀಡಲಿ ಎಂದು ಪ್ರಾರ್ಥಿಸಿದರು . ಇಂತಹ ದುರ್ಘಟನೆ ಮುಂದೆಂದೂ ಮರುಕಳಿಸದಿರಲಿ ಎಂದು ಹೇಳಿದರು .
ಆರಂಭದಲ್ಲಿ ಬಿಪಿನ್ ರಾವತ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಿಪಿನ್ ರಾವತ್ ಅಮರ್ ರಹೇ ಘೋಷಣೆ ಕೂಗಲಾಯಿತು .
ಬಿಪಿನ್ ರಾವತ್ ,ಅವರ ಪತ್ನಿ ಮತ್ತು ಇತರ  ಮೃತಸೇನಾ ಸಿಬ್ಬಂದಿಗಳ  ಅತ್ಮಕ್ಕೆ ಶಾಂತಿ ಕೋರಿ ಸಭೆ ಒಂದು ನಿಮಿಷದ ಮೌನಾಚರಣೆ ನಡೆಸಿತು .
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ ಪಿ ಸುರೇಶ್ ,ಮಾಜಿ ಮೂಡಾ ಅಧ್ಯಕ್ಷರಾದ ಮುನೀರ್ ಅಹಮದ್ , ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಸೈನಿಕ ಘಟಕದ ಜಿಲ್ಲಾಧ್ಯಕ್ಷರಾದ ಬೊಳ್ಳಿಯಂಡ ಗಣೆಶ್,ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಖಲೀಲ್ ಬಾಷ ,ನಗರ ಕಾಂಗ್ರೆಸ್ ಮಹಿಳಾಧ್ಯಕ್ಷರಾದ ಫ್ಯಾನ್ಸಿ ಪಾರ್ವತಿ ,ಮುಖಂಡರಾದ ಅಂಬೇಕಲ್ ನವೀನ್ , ಕಾನೆಹಿತ್ಲು ಮೊಣ್ಣಪ್ಪ ,ಯಾಕೂಬ್ ,ಜಿ ಸಿ ಜಗದೀಶ್ ,ಕೊಕ್ಕಂಡ ಚಂಗಪ್ಪ ,ಸೌಕತ್ ಆಲಿ ,ಬೊಳ್ನಂಡ ನಾಚಪ್ಪ ,ಸೌಕತ್ ಆಲಿ ,ಎಂ ಎಂ ಹನೀಫ್ ಎ ಜಿ ರಮೇಶ್ ,ರಾಣಿ. ಉಷಾ ಸೇರಿದಂತೆ ಇತರರು ಭಾಗವಹಿಸಿದ್ದರು .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ