ಬೆಂಗಳೂರು: ನಗರದಲ್ಲಿ ನಡೆಯುವ 11ದಿನಗಳ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಏಪ್ರಿಲ್ 1 ರಂದು ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರ ಮಾಡಿದೆ.
ಈ ಬಾರಿಯ ಬೆಂಗಳೂರು ಕರಗ ಏಪ್ರಿಲ್ 1 ರಂದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ಧೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ. ಇನ್ನೂ ಈ ಬಾರಿಯ ವಿಶೇಷ ಏನೆಂದರೆ ಮೈಸೂರು ದಸರಾ ಮಾದರಿಯಲ್ಲೇ ಈ ಬಾರಿಯ ಕರಗ ಉತ್ಸವಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಜ್ಞಾನೇಂಂದ್ರ ಸ್ವಾಮಿ ಅವರು 16ನೇ ಬಾರಿಗೆ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಜ್ಞಾನೇಂದ್ರ ಸ್ವಾಮಿ, ಈ ಸಲ 16ನೇ ಬಾರಿಗೆ ಕರಗ ಹೊರಲಿದ್ದಾರೆ.