ಒಂದು ಕೃತ್ಯ ಮಾಡಲು ಸುಮಾರು 20 ದಿನಗಳ ಕಾಲ ಪ್ಲಾನ್ ಮಾಡಿದ್ದ. ಇಡೀ ಪ್ರಕರಣಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದ ಆದ್ರೆ ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ತಾನು ಬರೆದ ಸ್ಕ್ರಿಪ್ಟ್ ತರ ಇರಲಿಲ್ಲ ಬದಲಾಗಿ ತಾನೇ ಎಣೆದ ಬಲೆಗೆ ಬಿದ್ದಿದ್ದಾನೆ. ಜುಲೈ 12 ರಂದು ಸಂಜೆ 7.30ಕ್ಕೆ ಹೈದರಬಾದಿಗೆ 3.780 ಕೆ.ಜಿ ಚಿನ್ನ ಕಳುಹಿಸಲು ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವಾಗ ಮಾರ್ಕೆಟ್ ಮೇಲುಸೇತುವೆ ಬಳಿ ಅಪರಿಚಿತರು ಹಿಂದಿನಿಂದ ಕಾಲಿನಿಂದ ಹೊಡೆದು ಬ್ಯಾಗ್ ನಲ್ಲಿ ಚಿನ್ನಾಭರಣ ದೋಚಿದ್ದಾರೆ ಎಂದು ರಾಜು ಜೈನ್ ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣವನ್ನು ಸಿರಿಯಸ್ಸಾಗಿ ತೆಗೆದುಕೊಂಡ ಪೊಲೀಸರು ಫೀಲ್ಡ್ ಗೆ ಇಳಿದ ಕಾಕಿ ಟೀಂ ಗೆ ಶಾಕ್ ಕಾದಿತ್ತು.
ರಾಜು ಜೈನ್ ನಗರ್ತಪೇಟೆಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರದಲ್ಲಿ ಲಾಸ್ ಆದ ಹಿನ್ನೆಲೆ ಇನ್ಶುರೆನ್ಸ್ ಕ್ಲೇಮ್ ಮಾಡಲು ತನ್ನ ಅಂಗಡಿಯಲ್ಲಿ ಇದ್ದ ಸುಮಾರು 4 ಕೆ ಜಿ ಚಿನ್ನ ಆಭರಣವನ್ನು ಯಾರೋ ಅಪರಿಚಿತರು ಕಿತ್ತುಕೊಂಡು ಹೋಗಿದ್ದಾರೆ ಎಂದು ಕಾಟನ್ ಪೇಟೆ ಪೋಲಿಸರಿಗೆ ದೂರು ನೀಡಿದ್ದ . ಅಲ್ಲದೆ ಇಡಿ ಸಿಟಿ ಮಾರ್ಕೇಟ್ ಸುತ್ತಾಡಿದ್ದ ಎಲ್ಲಿ ಸಿಸಿಟಿವಿಗಳು ಇಲ್ಲವೋ ಅಲ್ಲಿ ಕೃತ್ಯ ಆಗಿದೆ ಎಂದು ಅದಕ್ಕಾಗಿ ಅವನು ಮಾರ್ಕೆಟ್ ಫ್ಲೈ ಓವರಗ ಸೆಲೆಕ್ಟ್ ಮಾಡಿಕೊಂಡಿದ್ದ .
ತನ್ನ ಮೇಲೆ ಯಾರಿಗೂ ಅನುಮಾನ ಬಾರದಂತೆ ಮಾಡಲು ಅಧಿಕಾರಿಗಳಿಂದ ಹಾಗೂ ಸಂಬಂಧಿಕರಿಂದ ಪೋನ್ ಮಾಡಿಸಿ ಪೊಲೀಸರ ಮೇಲೆ ಒತ್ತಡ ಹಾಕಿಸಿದ್ದ. ಮೊಬೈಲ್ ಜಪ್ತಿ ಮಾಡಿಕೊಂಡು ಪರಿಶೀಲನೆ ವೇಳೆ ಅದೊಂದು ವಾಟ್ಸಾಪ್ ಕರೆ ದೂರುದಾರರ ಅಸಲಿ ಬಣ್ಣ ಬಯಲಾಗುವಂತೆ ಮಾಡಿದೆ.ತನ್ನ ಸ್ಟೋರಿ ಗೆ ಇಬ್ಬರು ಬಾಕಲರನ್ನ ಕೂಡ ಉಪಯೋಗಿಸಿಕೊಂಡಿದ್ದ. ಒಟ್ಟಿನಲ್ಲಿ ಸಖತ್ ಪ್ಲಾನ್ ಮಾಡಿಕೊಂಡವ ಕೊನೆಗೆ ಅಷ್ಟೇ ಸಲಿಸಾಲಿ ತಗಲಕ್ಕೊಂಡಿದ್ದಾನೆ.