ಬಿಬಿಎಂಪಿ ಕಳಪೆ ಕಾಮಾಗಾರಿ ನಿವಾಸಿಗಳಿಗೆ ಸಂಕಷ್ಟ

ಭಾನುವಾರ, 30 ಜುಲೈ 2023 (20:23 IST)
ಸಿಟಿಯಲ್ಲಿ ಬಿಬಿಎಂಪಿಯ ಕಳಪೆ ಕಾಮಗಾರಿ ಒಂದಾದ ಮೇಲೆ ಒಂದು ಬಯಲಾಗ್ತಾಯಿದೆ. ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಿಯಾದ ರಸ್ತೆ ಇಲ್ಲ. ಮಲ್ಲೇಶ್ವರಂನ ವಾರ್ಡ್ ನಂಬರ್ 65 ರಲ್ಲಿ ಅರ್ಧಂಬರ್ಧ ರಸ್ತೆ ಕಾಮಾಗಾರಿ ಮಾಡಿರೋದು ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ. ಅಲ್ಲದೇ ಶಾಲೆಯ ಮುಂದೆ ದೊಡ್ಡ ಚರಂಡಿಯೊಂದು ಬಾಯ್ತೆರಿದಿದೆ. ಕಳೆದ ೨-೩ ತಿಂಗಳುಗಳಿಂದ ಇಲ್ಲಿ ಸಮಸ್ಯೆ ತಲೆ ಎತ್ತಿ ನಿಂತಿದೆ.

ಸಿಲಿಕಾನ್ ಸಿಟಿಯ ಅಭಿವೃದ್ಧಿ ಮಾಡಬೇಕಿರೋ ಜನಪ್ರತಿನಿಧಿಗಳ, ಅಧಿಕಾರಿಗಳ ಕೆಲಸ ಕೇವಲ ತೋರಿಕೆಗೆ ಸೀಮಿತವಾಯ್ತಾ ಅನ್ನೋ ಅನುಮಾನ ಮೂಡ್ತಿದೆ. ಚುನಾವಣೆ ಸಮಯದಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದ ಜನಪ್ರತಿನಿಧಿಗಳು, ಚುನಾವಣೆ ಬಳಿಕ ಇತ್ತ ತಲೆಯೇ ಹಾಕಿಲ್ಲವಂತೆ. ರಸ್ತೆಯ ಅರ್ಧ ಭಾಗಕ್ಕೆ ಮಾತ್ರ ವೈಟ್ ಟಾಪಿಂಗ್ ಮಾಡಿದ್ದು, ಮಧ್ಯೆ ಭಾಗದಲ್ಲಿ ಜಲ್ಲಿಕಲ್ಲುಗಳು ಹಾಗೇ ಬಿಡಲಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡ್ತಿದೆ. ಇನ್ನು ಇದೇ ರಸ್ತೆಯಲ್ಲಿ ಪಾಲಿಕೆ ಕಚೇರಿ, ಬಿಬಿಎಂಪಿ ಸ್ಕೂಲ್ ಇದ್ದು ಪ್ರತಿನಿತ್ಯ ನೂರಾರು ಜನರು ಓಡಾಡುತ್ತಾರೆ. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಅರ್ಧಂಬರ್ಧ ಮಾಡಿರೋದು ಸ್ಥಳೀಯರು ಬೇಸರಗೊಂಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ