ಉಡುಪಿ: ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವು ಈಗ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯ ಮೂಲಕ ಸಹಜ ಸಾವು ಎನ್ನಲಾಗಿದೆ.
ಶಿರೂರು ಸ್ವಾಮೀಜಿಯವರ ಸಾವಿನ ಮಾಹಿತಿ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ಈ ಎರಡೂ ವರದಿಗಳನ್ನು ಹೋಲಿಕೆ ಮಾಡಿ ಅಂತಿಮ ವರದಿಯನ್ನು ಕೆಎಂಸಿ ವೈದ್ಯರು ನೀಡಲಿದ್ದಾರೆ. ಮರಣೋತ್ತರ ಪರೀಕ್ಷೆ ಅಂತಿಮ ವರದಿ ಎಫ್.ಎಸ್.ಎಲ್ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ.
ಮರಣೋತ್ತರ ವರದಿಯಲ್ಲಿ ಸಹಜ ಸಾವು ಎಂಬ ಉಲ್ಲೇಖವಿದೆ ಎನ್ನಲಾಗಿದೆ. ಶ್ರೀಗಳ ದೇಹದಲ್ಲಿ ವಿಷದ ಅಂಶವಿಲ್ಲ ಎಂಬ ವರದಿ ಪೊಲೀಸರ ಕೈಸೇರಿರುವ ಸಾಧ್ಯತೆ ಇದೆ. ಎರಡು ವರದಿ ಬಂದ ಬಳಿಕ ಸ್ವಾಮೀಜಿ ಸಾವಿಗೆ ಕಾರಣವನ್ನು ಮಣಿಪಾಲ ವೈದ್ಯರು ಪೊಲೀಸರಿಗೆ ವಿವರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ