ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಪತ್ತೆ ಶಿಕ್ಷಣ ತಜ್ಞರ ಕಳವಳ

ಬುಧವಾರ, 30 ನವೆಂಬರ್ 2022 (19:23 IST)
ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ ವಿಚಾರವಾಗಿ ಎಲ್ಲೆಡೆ ಬೇಸರ ವ್ಯಕ್ತವಾಗಿದೆ.ಈ ಬೆಳವಣಿಗೆ ಬಗ್ಗೆ ಶಿಕ್ಷಣ ತಜ್ಞ ಡಾ. ಸುಪ್ರೀತ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
 
ಇಂಥಾ ವಸ್ತುಗಳು ಸಲೀಸಾಗಿ ಮಕ್ಕಳ ಕೈಗೆ ಹೇಗೆ ಸಿಗ್ತಿದೆ ಅನ್ನೋದರ ಬಗ್ಗೆ ವಿಚಾರ ಮಾಡಬೇಕು.ಸಾಮಾಜಿಕ ಜಾಲತಾಣ ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆ.ಸೋಶಿಯಲ್ ಮೀಡಿಯಾದಿಂದ ಈ ಕಾಲದ ಮಕ್ಕಳು ವಯಸ್ಸಿಗಿಂತಲೂ ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುತ್ತಿದ್ದಾರೆ.ದೊಡ್ಡವರ ಬೇಕಾಬಿಟ್ಟಿ ನಡವಳಿಕೆಗಳಿಂದ ಮಕ್ಕಳು ಮಾನಸಿಕವಾಗಿ ಅನೈತಿಕ ಯೋಚನೆಗೆ ಜಾರುತ್ತಿದ್ದಾರೆ.ಮಕ್ಕಳ ಆಯೋಗ ಕಾಲಾಕಾಲಕ್ಕೆ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ನೈತಿಕ ಆಲೋಚನೆ ತುಂಬಬೇಕು.ಎಲ್ಲವೂ ಶಿಕ್ಷಕರು ಹಾಗೂ ಪೋಷಕರ ಕೈಯಲ್ಲೇ ಇದೆ, ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ ಎಂದು ಸುಪ್ರೀತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ