BMRCL ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮಾರ್ಚ್ 24, 2021 ರಿಂದ ಜನವರಿ 6, 2022 ರ ಬೆಳಗ್ಗೆವರೆಗೂ ರೀಚ್-2 (ನಗರ ರೈಲು ನಿಲ್ದಾಣದಿಂದ ಮೈಸೂರು ರಸ್ತೆಗೆ ಪಶ್ಚಿಮ ಮಾರ್ಗ)ದಲ್ಲಿ 25,13,630 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಮತ್ತು ರೀಚ್-1 ನಲ್ಲಿ (ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಪೂರ್ವ ಮಾರ್ಗ)ದಲ್ಲಿ 22,44,420 ರೂಪಾಯಿ ದಂಡ ವಸೂಲಿಯಾಗಿದೆ.
ಜನವರಿ 5 ರವರೆಗೆ ಮೆಟ್ರೋ ಹಾಗೂ ನಿಲ್ದಾಣದಲ್ಲಿ ಮಾಸ್ಕ್ ಧರಿಸದ ಒಟ್ಟು 10,113 ಪ್ರಕರಣಗಳು ದಾಖಲಾಗಿವೆ. ಜನವರಿ 1 ರಿಂದ ಜನವರಿ 5 ರವರೆಗೆ ರೈಲುಗಳಲ್ಲಿ ಮಾಸ್ಕ್ ಧರಿಸಿದ ಪ್ರಯಾಣಿಕರಿಂದ 2,49,950 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 'ನಾವು ಗುರುವಾರ ರಾತ್ರಿ 11.30 ಕ್ಕೆ ಒಂದು ಕೋಟಿ ದಂಡದ ಅಂಕಿಅಂಶವನ್ನು ಮಾಡಿದ್ದೇವೆ. ಬುಧವಾರ (ಜನವರಿ 5) ರಾತ್ರಿಯವರೆಗೆ, BMRCL 99,90,320 ರೂಪಾಯಿ ದಂಡ ವಸೂಲಿಯಾಗಿತ್ತು' ಎಂದು ಮೆಟ್ರೋದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BMRCL ಕಾರ್ಯನಿರ್ವಾಹಕ ಎ ಎಸ್ ಶಂಕರ್, "ಇದನ್ನು ನಾವು ಯಾವುದೇ ಸಾಧನೆ ಎಂದು ನೋಡುವುದಿಲ್ಲ. ಇದನ್ನು ಸಾಮಾನ್ಯ ಜನರ ಒಳಿತಿಗಾಗಿ ಮಾಡಲಾಗುತ್ತದೆ. ನಮ್ಮ ಪ್ರಯಾಣಿಕರ ಮೇಲೆ ದಂಡ ವಿಧಿಸಲು ನಾವು ನಿಜವಾಗಿಯೂ ಆಸಕ್ತಿ ಹೊಂದಿಲ್ಲ. ಕರ್ನಾಟಕ ಸರ್ಕಾರ ಮತ್ತು BMRCL ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನಾವು ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದಿದ್ದಾರೆ.