ಮಾಜಿ ಸಿಎಂ ವಿರುದ್ಧ ಎಫ್ ಐ ಆರ್

ಭಾನುವಾರ, 21 ಅಕ್ಟೋಬರ್ 2018 (14:43 IST)
ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಆರೋಪಿಯಾಗಿರುವ ಮಾಜಿ ಸಿಎಂ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಕೇರಳ ಮಾಜಿ ಸಿಎಂ ಊಮನ್ ಚಾಂಡಿ ವಿರುದ್ಧ ಎಫ್ ಐ ಆರ್ ದಾಖಲು ಆಗಿದೆ. ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಊಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರೂ. ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.

ಇದೇ ಪ್ರಕರಣದ ಮುಂದುವರಿದ ಭಾಗವಾಗಿ, ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರು ಸಿಎಂ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ, ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಳಿ ಎಫ್ ಐ ಆರ್ ಪ್ರತಿ ಸಲ್ಲಿಸಲಾಗಿದೆ ಎನ್ನಲಾಗಿದೆ.

ಸೋಲಾರ್ ಘಟಕ ಯೋಜನೆಗೆ ಖಾಸಗಿ ಸಂಸ್ಥೆ ಹೂಡಿಕೆ ಬಗ್ಗೆ ಮಾತುಕತೆಗೆ ತೆರಳಿದ್ದಾಗ, ಡೀಲ್ ಗೆ ಒಪ್ಪಿಗೆ ಸೂಚಿಸಿದ್ದ ಚಾಂಡಿ, ಅವರು ಬದಲಿಗೆ ಮಂಚ ಏರಿ ಸುಖ ಕೊಡು ಎಂದು ನನ್ನನ್ನು ಬಲವಂತಪಡಿಸಿದರು ಎಂದು ಸರಿತಾ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ