‘ಡಿ ಬಾಸ್’ ದರ್ಶನ್ ಗೆ ದಾಳಿ ಎಚ್ಚರಿಕೆ ನೀಡಿದ್ದ ಜೆಡಿಎಸ್ ಶಾಸಕರ ವಿರುದ್ಧ ಎಫ್ ಐಆರ್
ಶುಕ್ರವಾರ, 22 ಮಾರ್ಚ್ 2019 (10:12 IST)
ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆಗಿಳಿಯುತ್ತಿರುವ ಸುಮಲತಾ ಅಂಬರೀಶ್ ಗೆ ಬೆಂಬಲಿಸುವ ನಟ ದರ್ಶನ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಜೆಡಿಎಸ್ ಶಾಸಕ ಕೆಸಿ ನಾರಾಯಣ ಗೌಡ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಸರ್ಕಾರ ನಮ್ಮದೇ ಇದೆ. ನಿಮ್ಮ ಸಿನಿಮಾ ನೋಡಿಕೊಂಡು ಅಷ್ಟರಲ್ಲೇ ಇರಿ. ಚುನಾವಣಾ ಕಣಕ್ಕೆ ಬಂದರೆ ವಿಚಾರಣೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದರು. ಇದು ಡಿ ಬಾಸ್ ಅಭಿಮಾನಿಗಳನ್ನೂ ಕೆರಳಿಸಿತ್ತು.
ಇನ್ನು, ಈ ರೀತಿ ಮಾಡಿದ ಶಾಸಕರಿಗೆ ಮಂಡ್ಯದ ಅಂಬರೀಶ್ ಅಭಿಮಾನಿಗಳೇ ಇರಿಸುವಮುರಿಸಾಗುವಂತೆ ಮಾಡಿದ್ದಾರೆ. ಕೆ.ಆರ್ ಪೇಟೆ ತಾಲೂಕಿನ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಶಾಸಕರ ಎದುರು ಜೋರಾಗಿ ಡಿ ಬಾಸ್ ಎಂದು ಕೂಗಿ ಅಭಿಮಾನಿಗಳು ಮುಜುಗರ ತಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ