ಶಾಸಕ ಪರಮೇಶ್ವರ ನಾಯ್ಕ್ ವಿರುದ್ಧ ಎಫ್ ಐ ಆರ್

ಬುಧವಾರ, 17 ಜೂನ್ 2020 (17:39 IST)
ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಹಾಗೂ ಅವರ ಎರಡನೇ ಪುತ್ರನ ವಿರುದ್ಧ ಕೇಸ್ ದಾಖಲಾಗಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ ಶಾಸಕ ಪರಮೇಶ್ವರ ನಾಯ್ಕ ವಿರುದ್ಧ ಮಗನ ಮದುವೆಯಲ್ಲಿ   ಲಾಕ್ ಡೌನ್ ನಿಯಮ ‌ಉಲ್ಲಂಘನೆ ಬಗ್ಗೆ ಅರಸಿಕೆರೆ ಠಾಣೆಯಲ್ಲಿ  ಎಫ್ ಐ ಆರ್ ದಾಖಲಾಗಿದೆ.

ಹರಪನಹಳ್ಳಿ ತಾಲೂಕಿನ ಲಕ್ಷ್ಮಿ ಪುರದಲ್ಲಿ ಮಗ ಅವಿನಾಶ್ ಮದುವೆಯನ್ನು  ಕೊರೋನಾ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನರನ್ನು ಸೇರಿಸಿದ್ದರು ಪರಮೇಶ್ವರ ನಾಯ್ಕ. ‌

ಈ ಬಗ್ಗೆ ಮಾಧ್ಯಮಗಳು ಸುದ್ದಿ‌ ಪ್ರಸಾರ‌ ಮಾಡುತ್ತಿದ್ದಂತೆ,  ಜಿಲ್ಲಾಧಿಕಾರಿ ನಕುಲ್ ಅವರ  ಸೂಚನೆ ಮೇರೆಗೆ ಹರಪನಹಳ್ಳಿ ತಹಶಿಲ್ದಾರರ ನಾಗವೇಣಿ ಅವರು ಅರಸಿಕೇರಿ ಠಾಣೆಯಲ್ಲಿ ದೂರು ನೀಡಿದ್ದರು.

ಎಫ್ ಐ ಆರ್ ದಾಖಲು ಮಾಡಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಹಿನ್ನಲೆಯಲ್ಲಿ ಪ್ರಕರಣ ದಾಖಲು ವಿಳಂಬವಾಗಿತ್ತು.

ಕೊರೋನಾ ನಿಯಮಗಳನ್ನು ‌ಮೀರಿ ಜನರು ಸೇರಿಸಿದ ಆರೋಪ ಮತ್ತು ಅಪಾಯವಿದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ‌ಪಿ.ಟಿ.ಪರಮೇಶ್ವರ ನಾಯ್ಕ ಅವರು ಎ.2 ಮತ್ತು ಪರಮೇಶ್ವರ ನಾಯ್ಕ ಎರಡನೇ ಮಗ  ಭರತ್ ಎ.1 ಎಂದು
ಸೆಕ್ಷನ್ 269,  270, 271, 136 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ