ಮಾಸ್ಕ್ ಇಲ್ಲದ ಬೈಕ್ ಸವಾರರು ದಂಡ ಕಟ್ಟಿದ್ದು ಏಷ್ಟು?
ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.
ಬೆಳ್ಳಂಬೆಳ್ಳಿಗೆ ಕೋವಿಡ್-19 ನಿಯಮಗಳನ್ವಯ ಕಾರ್ಯಾಚರಣೆಗೆ ಇಳಿದಿರುವ ಅಧಿಕಾರಿಗಳು ತಲಾ 100 ರೂ. ದಂಡದಂತೆ ಒಂದು ಗಂಟೆಯಲ್ಲಿ 15 ಪ್ರಕರಣಗಳ ಮೂಲಕ ಒಟ್ಟು 1500 ದಂಡ ಸಂಗ್ರಹಿಸಿದ್ದಾರೆ. ಒಟ್ಟು 25 ಸಾವಿರಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
ತಂಡಗಳನ್ನು ರಚಿಸಿಕೊಂಡು ರಸ್ತೆಗಿಳಿದಿರುವ ಅಧಿಕಾರಿಗಳು, ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡುತ್ತಿರುವವರಿಗೆ ದಂಡ ವಿಧಿಸುತ್ತಿದ್ದಾರೆ. ಸ್ಥಳದಲ್ಲೆ ಮಾಸ್ಕ್ ವಿತರಿಸುತ್ತಿದ್ದಾರೆ. ಅಲ್ಲದೆ ಈವರೆಗೆ ನಗರದಲ್ಲಿ 230 ಪ್ರಕರಣಗಳ ಮೂಲಕ 25 ಸಾವಿರಕ್ಕೂ ಅಧಿಕ ದಂಡ ಸಂಗ್ರಹಿಸಲಾಗಿದ್ದು, ಒಂದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದೆ.