ಶಸ್ತ್ರಾಗಾರ ಲೂಟಿ ಮಾಡಿದ್ದ ಏಳು ಮಂದಿ ವಿರುದ್ದ ಎಫ್‌ಐಆರ್‌

geetha

ಭಾನುವಾರ, 3 ಮಾರ್ಚ್ 2024 (14:40 IST)
ಮಣಿಪುರ :ಬಿಷ್ಣುಪುರ ಪೊಲೀಸ್‌ ಠಾಣೆಯ ಶಸ್ತ್ರಾಗಾರ ಹಾಗೂ 2ನೇ ಮೀಸಲು ಬೆಟಾಲಿಯನ್‌ ಶಸ್ತ್ರಾಗಾರದಿಂದ ದಂಗೆ ಕೋರರು ಶಸ್ತ್ರಾಸ್ತ್ರಗಳನ್ ಲೂಟಿ ಮಾಡಿದ್ದರು. ಕಳೆದ ವರ್ಷ ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ವೇಳೆ ಪೊಲೀಸ್‌ ಠಾಣೆ ಹಾಗೂ  ಮಿಲಿಟರಿ ಮುಖ್ಯ ಕಚೇರಿಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಸಿಬಿಐ ಏಳು ಮಂದಿಯ ವಿರುದ್ದ ಎಫ್ಐಆರ್‌ ದಾಖಲಿಸಿ ದೆ. 300 ಕ್ಕೂ ಹೆಚ್ಚು ಬಂದೂಕುಗಳು ಹಾಗೂ 19, 800 ಸುತ್ತು ಗಂಡುಗಳನ್ನು ದೋಚಲಾಗಿತ್ತು. 

ಲೈಶರಾಮ್‌ ಪ್ರೇಮ್‌ ಸಿಂಗ್,‌ ಖುಮುಕ್‌ ಚಾಮ್‌ ಧಿರೇನ್‌ ಅಲಿಯಾಸ್‌ ಥಪ್ಕಾ, ಮೊರಂಗ್ತಮ್‌  ಆನಂದ್‌ ಸಿಂಗ್‌, ಅಥೋಕ್ಪಮ್‌ ಕಜಿತ್‌ ಅಲಿಯಾಸ್‌ ಕಿಶೋರ್ಜಿತ್‌, ಲೌಕ್ರಾಪಮ್‌ ಮೈಕಲ್‌ ಮಂಗಂಗ್ಚ , ಕೊಂತೋಜಮ್‌ ರೊಮೋಜಿತ್‌ ಮೈತೈ ಹಾಗೂ ಕೈಶಮ್‌ ಜಾನ್ಸನ್‌ ಬಂಧಿತ ಆರೋಪಿಗಳಾಗಿದ್ದಾರೆ. 
 
ಕಳೆದ ವರ್ಷ ಮೇ. 3 ರಂದು ದಂಗೆ ಮತ್ತು ಹಿಂಸಾಚಾರ ಪ್ರಾರಂಭಗೊಂಡಿತ್ತು. ಚುರ್ಚಂದ್‌ ಪುರ್‌ ನಲ್ಲಿ ಒಗ್ಗೂಡಿದ್ದ ದಂಗೆಕೋರರು ಶಸ್ತ್ರಾಸ್ತ್ರಗಳನ್ನು ಲೂಟಿಗೈದು ಸಾಮೂಹಿಕ ಕಗ್ಗೊಲೆ ನಡೆಸಲು ಪ್ರಯತ್ನ ನಡೆಸಿದ್ದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ