ವಿರಾಟ್ ಕೊಹ್ಲಿ ಮಾಲಿಕತ್ವದ ಬೆಂಗಳೂರಿನ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್ಐಆರ್

Krishnaveni K

ಮಂಗಳವಾರ, 9 ಜುಲೈ 2024 (09:46 IST)
Photo Credit: X
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಮಾಲಿಕತ್ವದ ಬೆಂಗಳೂರಿನ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇದರ ಬಗ್ಗೆ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ.

ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯೂನ್ ಪಬ್ ಮಾತ್ರವಲ್ಲದೆ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆಂಡ್ ರೆಸ್ಟೋರೆಂಟ್ ಮೇಲೂ ಪ್ರಕರಣ ದಾಖಲಾಗಿದೆ. ಅವಧಿ ಮೀರಿ ಪಬ್ ತೆರೆದ ತಪ್ಪಿಗೆ ಎಫ್ ಐಆರ್ ದಾಖಲಾಗಿದೆ.

ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜುಲೈ 6 ರ ರಾತ್ರಿ ಘಟನೆ ನಡೆದಿತ್ತು. ರಾತ್ರಿ 12 ಗಂಟೆವರೆಗೂ ಪಬ್ ಓಪನ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಈ ನಗರದ ಈ ಫೇಮಸ್ ರೆಸ್ಟೋರೆಂಟ್ ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ತಡರಾತ್ರಿವರೆಗೂ ಗ್ರಾಹಕರು ಮನೆಯಲ್ಲಿದ್ದರು. ಇದು ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವಧಿ ಮೀರಿ ಪಬ್ ಓಪನ್ ಮಾಡುವುದು ಅಪರಾಧವಾಗಿರುತ್ತದೆ. ಈ ಕಾರಣಕ್ಕೆ ಕೊಹ್ಲಿ ಒಡೆತನದ ಪಬ್ ಕೂಡಾ ಸಂಕಷ್ಟಕ್ಕೆ ಸಿಲುಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ