ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮ, ಕಣ್ಣೀರಿಟ್ಟ ರೈತ ಕುಟುಂಬ..!
ಸೋಮವಾರ, 12 ನವೆಂಬರ್ 2018 (19:23 IST)
ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಂಪೂರ ಗ್ರಾಮದಲ್ಲಿ ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ದೇವಮ್ಮ ಗಂಡ ಭೀಮಶೆಪ್ಪ ಎಂಬುವವರಿಗೆ ಸೇರಿದ ಸಜ್ಜೆ ಗೂಡಿಗೆ ರಾತ್ರಿ ಬೆಂಕಿ ತಗುಲಿದ್ದು, ಬೆಂಕಿಯಲ್ಲಿ ಸಜ್ಜೆ ಗೂಡು ಸಂಪೂರ್ಣವಾಗಿ ಭಸ್ಮವಾಗಿದೆ.
ಸಜ್ಜೆ ಗೂಡಿಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈತ ಕುಟುಂಬ ಕಣ್ಣೀರಿಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ದುಃಖ ವ್ಯಕ್ತಪಡಿಸಿದೆ.
ಆಕಸ್ಮಿಕವೋ, ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೋ ಗೋತ್ತಿಲ್ಲ. ನಾವು ಸಜ್ಜೆ ತನೆಗಳನ್ನು ಮುರಿದು ಗುಂಪು ಹಾಕಿ ಸಜ್ಜೆ ರಾಶಿ ಮಾಡಲು ಮುಂದಾಗಿದ್ದೇವು. ರಾತ್ರೋ ರಾತ್ರಿ ಎರಡು ಸಜ್ಜೆ ಗೂಡಿನ ತೆನೆಗಳು ಸುಟ್ಟಿದ್ದು ಅಪಾರ ನಷ್ಟವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಂಬಂಧಿಸಿದ ಇಲಾಖೆಯವರು ರೈತ ಕುಟುಂಬಕ್ಕೆ ನೆರವಾಗುವ ಕೆಲಸ ಮಾಡುವುದೋ ಕಾದು ನೋಡಬೇಕಾಗಿದೆ.