ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ

ಶುಕ್ರವಾರ, 19 ಮೇ 2023 (11:30 IST)
ಬೆಂಗಳೂರು : ಗೋಡೌನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಬಸ್ ಗಳು ಬೆಂಕಿಗಾಹುತಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಆರ್ಆರ್ ನಗರದ ಐಟಿಐ ಲೇಔಟ್ ನ ಇಂಡೆನ್ ಗ್ಯಾಸ್ ಏಜೆನ್ಸಿ ಸಮೀಪದಲ್ಲಿರುವ ಸ್ಕ್ರಾಪ್ ಗೋಡೌನಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ತಗುಲಿ ಇಡೀ ಗೋಡೌನ್ ಧಗ-ಧಗನೆ ಹೊತ್ತಿ ಉರಿದಿದೆ.

ಪರಿಣಾಮ ಮೂರು ಬಸ್ಗಳು ಸುಟ್ಟು ಕರಕಲಾಗಿವೆ. ಬೆಂಕಿ ಜ್ವಾಲೆ ವ್ಯಾಪಿಸದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ