ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಹಸುಗೂಸು ಸಜೀವ ದಹನ
ಅರಣ್ಯ ಇಲಾಖೆಯ ಸಾಗುವಳಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ದಂಪತಿಯ 9 ತಿಂಗಳ ಕಂದಮ್ಮ ಬೆಂಕಿಗೆ ಆಹುತಿಯಾಗಿದೆ. ಇಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಿದ್ದು, ಅವುಗಳನ್ನು ಬೆದರಿಸಲು ಬೆಂಕಿ ಹಚ್ಚಲಾಗಿತ್ತು. ಇದು ಅಕಸ್ಮತ್ತಾಗಿ ಗುಡಿಸಲಿಗೆ ತಗುಲಿದೆ.
ಈ ಸಂದರ್ಭದಲ್ಲಿ ತಾಯಿ ಪಕ್ಕದ ನದಿಗೆ ನೀರು ತರಲೆಂದು ಹೊರ ಹೋಗಿದ್ದಳು. ಈ ಸಂದರ್ಭದಲ್ಲಿ ಮಗು ಮಾತ್ರ ಮನೆಯಲ್ಲಿತ್ತು. ಆಗ ದುರ್ಘಟನೆ ನಡೆದಿದೆ. ಮಹದೇಶ್ವರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.