ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್; ರೌಡಿ ಶೀಟರ್ ಗೆ ಗಾಯ

ಶುಕ್ರವಾರ, 15 ಡಿಸೆಂಬರ್ 2017 (07:55 IST)
ಕಲಬುರಗಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಘಟನೆಯಲ್ಲಿ ರೌಡಿಶೀಟರ್ ಯಶವಂತ್ ಎಡಗಾಲಿಗೆ ಗಾಯವಾಗಿದೆ. ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ  ಈ ಘಟನೆ ನಡೆದಿದೆ.


ಯಶವಂತ್ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ಹಾಗೂ ವಿವಿಧ ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದ. ಯಶವಂತ್ ಅನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ, ಯಶವಂತ್ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ಆತ್ಮರಕ್ಷಣೆಗಾಗಿ ಗ್ರಾಮೀಣ ಠಾಣೆ ಪಿಎಸ್ ಐ ತಿಗಡಿ ಅವರು ಫೈರಿಂಗ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಪೇದೆಗಳಾದ ಕುಶನ್, ಕುಪೇಂದ್ರ ಗಾಯಗೊಂಡಿದ್ದಾರೆ. ಆರೋಪಿ ಯಶವಂತ್ ಗೆ ಜಿಲ್ಪಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕೊಲೆ, ಸುಲಿಗೆ ಸೇರಿ ಹಲವು ಪ್ರಕರಣಗಳಲ್ಲಿ ಬೇಕಿದ್ದ ರೌಡಿಶೀಟರ್ ನ ಮೇಲೆ ಪೊಲೀಸ್ರು ಗುಂಡು ಹಾರಿಸಿದ್ದಾರೆ. ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ ಬಳಿ ಘಟನೆ ನಡೆದಿದ್ದು ಘಟನೆಯಲ್ಲಿ ರೌಡಿಶೀಟರ್ ಯಶವಂತ ಕಾಲಿಗೆ ಗುಂಡು ತಾಗಿದೆ. ರೌಡಿಶೀಟರ್ ಯಶವಂತ ತಾವರಗೇರಾ ಬಳಿ ಬರ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ರು ಆತನನ್ನು ಬಂಧಿಸಲು ತೆರಳಿದ್ದರು. 

 
ಆ ವೇಳೆ ಪೊಲೀಸ್ರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದ್ರಿಂದ ಆತ್ಮರಕ್ಷಣೆಗಾಗಿ ಪೊಲೀಸ್ರು ರೌಡಿಶೀಟ್ ಯಶವಂತ ಮೇಲೆ ಗುಂಡು ಹಾರಿಸಿದ್ದು ಕಾಲಿಗೆ ಗುಂಡು ತಾಗಿವೆ. ಗಾಯಗೊಂಡ ಆತನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನು ಘಟನೆಯಲ್ಲಿ ಕುಪೇಂದ್ರ ಹಾಗೂ ಕುಶನ್ ಎನ್ನುವ ಪೊಲೀಸ್ರಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.: ಹೌದು, ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕೊಲೆ, ಸುಲಿಗೆ, ದೊಂಬಿ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್  ಮೇಲೆ ಪೊಲೀಸ್ರು ಗುಂಡು ಹಾರಿಸಿದ್ದಾರೆ. ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ ಬಳಿ ಘಟನೆ ನಡೆದಿದ್ದು ಘಟನೆಯಲ್ಲಿ ರೌಡಿಶೀಟರ್ ಯಶವಂತ ಕಾಲಿಗೆ ಗುಂಡು ತಾಗಿದೆ. ರೌಡಿಶೀಟರ್ ಯಶವಂತ ತಾವರಗೇರಾ ಬಳಿ ಬರ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ರು ಆತನನ್ನು ಬಂಧಿಸಲು ತೆರಳಿದ್ದರು. ಆ ವೇಳೆ ಪೊಲೀಸ್ರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದಾನೆ. ಇದ್ರಿಂದ ಆತ್ಮರಕ್ಷಣೆಗಾಗಿ ಪೊಲೀಸ್ರು ರೌಡಿಶೀಟ್ ರ ಯಶವಂತ ಮೇಲೆ ಗುಂಡು ಹಾರಿಸಿದ್ದು ಗಾಲಿಗೆ ಗಾಯಗಳಾಗಿವೆ. ಆತನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನು ಘಟನೆಯಲ್ಲಿ ಕುಪೇಂದ್ರ ಹಾಗೂ ಕುಶನ್ ಎನ್ನುವ ಪೊಲೀಸ್ರಿಗೂ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನು ಎರಡೂ ಆಸ್ಪತ್ರೆಗಳಿಗೂ ಐಜಿಪಿ ಅಲೋಕಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಮ್ಮ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ.
 
ಇನ್ನು ಪೊಲೀಸ್ರ ಗುಂಡೇಟು ತಿಂದಿರುವ ಯಶವಂತ, ಕಲಬುರಗಿ ಸಮೀಪದ ತಾಜ್ ಸುಲ್ತಾನಪೂರ್ ನಿವಾಸಿಯಾಗಿದ್ದು ಕಳೆದ ಹಲವು ವರ್ಷಗಳಿಂದ ರೌಡಿಸಂನಲ್ಲಿ ತೊಡಗಿಸಿದ್ದಾನೆ. ಇನ್ನು ಕಳೆದ ಒಂದು ತಿಂಗಳ ಹಿಂದೆ ಜೇಸ್ಕಾಂ ಗುತ್ತಿಗೆದಾರ ಮೋನಪ್ಪನನ್ನು ಅಪಹರಿಸಿ ಆತನಿಂದ 6 ಲಕ್ಷ ರೂಪಾಯಿ ಹಣ ಪಡೆದಿದ್ದಲ್ಲದೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ಆ ಹಣದಲ್ಲಿಯೇ ಮುಂಬೈ, ಕಲ್ಕತ್ತಾ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡಿದ್ದಾನೆ. ಈಗ ಹಣ ಖಾಲಿಯಾಗಿರೋದ್ರಿಂದ ಕಲಬುರಗಿಗೆ ಬಂದಿದ್ದಾನೆ ಎನ್ನುವ ಮಾಹಿತಿ ಮೇರೆಗೆ ಕಲಬುರಗಿ ಗ್ರಾಮೀಣ ಡಿವಾಯ್ ಎಸ್ಪಿ ಹುಲ್ಲೂರು ನೇತೃತ್ವದಲ್ಲಿ ಪಿಎಸ್ ಐ ಚಂದ್ರಶೇಖರ್ ತಿಗಡಿ ಸೇರಿ ಸಿಬ್ಬಂದಿಗಳು ತೆರಳಿದ್ದಾರೆ. ಬಂದಿಸಲು ಹೋಗಿದ್ದ ವೇಳೆ ವಾಪಸ್ಸು ಪೊಲೀಸ್ರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಪಿಎಸ್ ಚಂದ್ರಶೇಖರ್ ತಿಗಡಿ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ತಕ್ಷಣ ಕೆಳಗಡೆ ಬಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಂದ ಒಂದು ಪಿಸ್ತೂಲ್, ತಲವಾರ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆಯಲ್ಲದೇ ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳನ್ನು ಬಂಧಿಸಲು ಹೋಗುವ ಪೊಲೀಸ್ರ ಮೇಲೆಯೇ ಹಲ್ಲೆ ನಡೆಯುತ್ತಿರುದು ಕೂಡಾ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕ್ಬೇಕು ಎನ್ನುವ ಆಗ್ರಹ ಸ್ಥಳೀಯರದ್ದು.
 
ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ರೌಡಿಗಳ ಮಟ್ಟ ಹಾಕಲು ಹೋಗುವ ಪೊಲೀಸ್ರ ಮೇಲೆಯೇ ವಾಪಸ್ಸು ಹಲ್ಲೆ ಮಾಡ್ತಿರೋದು ದುರಂತವೇ ಸರಿ. ಇನ್ಮೂಂದಾದ್ರೂ ಪೊಲೀಸ್ರು ಕ್ರಮಕೈಗೊಂಡು ರೌಡಿಗಳ ಮಟ್ಟ ಹಾಕಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ