ಫ್ರಾನ್ಸ್​​ನಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ

ಭಾನುವಾರ, 22 ಮೇ 2022 (19:35 IST)
ಅತ್ಯಂತ ಅಪರೂಪದ ಸೋಂಕಾದ ಮಂಕಿ ಪಾಕ್ಸ್ ವೈರಸ್ ಪ್ರಕರಣಗಳು ಯುರೋಪ್ ಮತ್ತು ಅಮೆರಿಕದಲ್ಲಿ ದೃಢಪಟ್ಟಿವೆ.. ಈ ಕುರಿತು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆ ಕರೆದಿದೆ. ಇದರ ನಡುವೆ ಫ್ರಾನ್ಸ್
ನಲ್ಲಿ ಮೊದಲ ಮಂಕಿಪಾಕ್ಸ್ ಪತ್ತೆಯಾಗಿದೆ. ಜರ್ಮನಿ ಮತ್ತು ಬೆಲ್ಜಿಯಂ ತಮ್ಮ ಮೊದಲ ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಫ್ರಾನ್ಸ್​​ನಲ್ಲೂ ಮಂಕಿಪಾಕ್ಸ್ ಪತ್ತೆಯಾಗಿದೆ. ಯುರೋಪ್ನಲ್ಲಿ ಮಂಕಿಪಾಕ್ಸ್ ಕೇಸ್​​ಗಳು ಈಗ 100ರ ಗಡಿ ದಾಟಿದೆ. ನಿನ್ನೆ ಫ್ರಾನ್ಸ್ ಮತ್ತು ಜರ್ಮನಿ ತಮ್ಮ ಮೊದಲ ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದ್ದು, ಆಫ್ರಿಕಾದ ಕೆಲವು ಭಾಗಗಳಲ್ಲಿ ಸ್ಥಳೀಯವಾಗಿ ಹರಡಿರುವ ರೋಗವನ್ನು ಪತ್ತೆ ಹಚ್ಚುವಲ್ಲಿ ಹಲವಾರು ಯುರೋಪಿಯನ್ ಮತ್ತು ಉತ್ತರ ಅಮೆರಿಕದ ರಾಷ್ಟ್ರಗಳೊಂದಿಗೆ ಸೇರಿಕೊಂಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ