ಕೇರಳದಲ್ಲಿ ಮೊದಲ ಓಮಿಕ್ರಾನ್ ಪತ್ತೆ!

ಮಂಗಳವಾರ, 14 ಡಿಸೆಂಬರ್ 2021 (08:49 IST)
ತಿರುವನಂತಪುರ : ಯುರೋಪ್ನಿಂದ ಕೇರಳಕ್ಕೆ ಆಗಮಿಸಿದ ವ್ಯಕ್ತಿಗೆ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ.

ಇದು ಕೇರಳದಲ್ಲಿ ಪತ್ತೆಯಾಗಿರುವ ಮೊದಲ ಓಮಿಕ್ರಾನ್ ಪ್ರಕರಣವಾಗಿದೆ.
ಡಿಸೆಂಬರ್ 6ರಂದು ಅಬುಧಾಬಿಯಿಂದ ಯುರೋಪ್ ಮುಖಾಂತರ ಡಿಸೆಂಬರ್ 8ರಂದು ಕೇರಳದ ಎರ್ನಾಕುಲಂಗೆ ರೋಗಿ ಬಂದಿದ್ದಾರೆ. ದುಬೈನಲ್ಲಿ ವ್ಯಕ್ತಿಗೆ ನೆಗೆಟಿವ್ ವರದಿ ಬಂದಿತ್ತು. ಆದರೆ ಡಿಸೆಂಬರ್ 8ರಂದು ಕೇರಳದಲ್ಲಿ ಸೋಂಕು ಧೃಡಪಟ್ಟಿದೆ.

ಅಲ್ಲದೇ ಸೋಂಕಿತ ಸಮೀಪದಲ್ಲಿದ್ದ 149 ಪ್ರಯಾಣಿಕರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. 

ರೋಗಿಯ ಪತ್ನಿ ಹಾಗೂ ತಾಯಿಗೂ ಕೊರೊನಾ ಸೋಂಕು ಧೃಡಪಟ್ಟಿದ್ದು, ಅವರನ್ನು ಕ್ವಾರಂಟೈನ್ಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕಿತನ ಸಂಪರ್ಕ ಹೊಂದಿದ್ದವರನ್ನು ಗುರುತಿಸಲಾಗಿದೆ. ನಾವು ಬಹಳ ಮುನ್ನೆಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದೇವೆ ಮತ್ತು ಯಾರು ಸಹ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ