ಡಿಸ್ಜಾರ್ಜ್ ಆಗುವ ಮುನ್ನ ಮೂರು ದಿನದಲ್ಲಿ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣ ಇರಬಾರದು. ಯಾವುದೇ ಆಮ್ಲಜನಕ ಬೆಂಬಲ ಇಲ್ಲದೇ 4 ದಿನಗಳ ಕಾಲ 95% ಆಮ್ಲಜನಕ ಮಟ್ಟ ಇದ್ದರೆ ಡಿಸ್ಜಾರ್ಜ್ ಮಾಡಬಹುದು. ಡಿಸ್ಜಾರ್ಜ್ ಆದ ಮೇಲೆ ರೋಗ ಲಕ್ಷಣ ಕಂಡು ಬಂದರೆ ಏನು ಮಾಡಬೇಕು, ಯಾವುದನ್ನು ತೆಗೆದುಕೊಳ್ಳಬೇಕು ಎಂಬುದ ಬಗ್ಗೆ ಸಲಹೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಡಿಸ್ಸಾರ್ಜ್ ಆದ ವ್ಯಕ್ತಿಗೆ ಹೊಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಬೇಕು. ಮನೆ ಪ್ರತ್ಯೇಕಯಲ್ಲಿ ಇರುವ ವ್ಯಕ್ತಿಗೆ ಮತ್ತೆ 6ನೇ ದಿನಕ್ಕೆ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ. ಓಮಿಕ್ರಾನ್ ನಿಯಂತ್ರಿಸಲು ಹಾಗೂ ರೋಗಿಗಳನ್ನು ಹೇಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಇಲಾಖೆ ರೂಪಿಸಿದ ನಿಯಮಗಳು ರಾಜ್ಯದಲ್ಲಿ ಸರಿಯಾಗಿ ಪಾಲನೆಯಾದಲ್ಲಿ ಓಮಿಕ್ರಾನ್ ಹರಡುವಿಕೆ ತಡೆಯುವುದು ಸಾಧ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ತಿಳಿಸಿದೆ.