ಪಂಚರಾಜ್ಯಗಳ ಫಲಿತಾಂಶ ಕಂಡು ಅಕ್ಷರಶಃ ಕಣ್ಣೀರು ಸುರಿಸಿದ್ದೇನೆ: ಜಿ.ಪರಮೇಶ್ವರ್

ಶನಿವಾರ, 21 ಮೇ 2016 (13:59 IST)
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬೇಸರ ತಂದಿದ್ದು. ಮೊನ್ನೆ ಫಲಿತಾಂಶ ನೋಡುವಾಗ ಅಕ್ಷರಶಃ ಕಣ್ಣೀರು ಸುರಿಸಿದ್ದೇನೆ ಎಂದು ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಬೇಸರ ವ್ಯಕ್ತ ಪಡಿಸಿದ್ದಾರೆ.
 
ಬೆಂಗಳೂರಿನ ಕೆಪಿಎಸ್‌ಸಿ ಕಛೇರಿಯಲ್ಲಿ ಇಂದು ರಾಜೀವ್ ಗಾಂಧಿಯವರ 25 ನೇಯ ಪುಣ್ಯ ಸ್ಮರಣೆ ಕಾರ್ಯಕ್ರಮ ಜರುಗಿತ್ತು. ಈ ವೇಳೆ ಮಾತನಾಡಿದ ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್, ಪಂಚರಾಜ್ಯ ಚುನಾವಣೆಗೆ ಬೇಸರ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದರು, ಮುಂದಿನ ಪೀಳಿಗೆಗೆ ಕಾಂಗ್ರೆಸ್ ಕುರಿತು ಎನೂ ಅಂತ ಹೇಳಿ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು ತಿಳಿಯದು ಎಂದು ಕಾಂಗ್ರೆಸ್ ಸಾಧನೆಯ ಕುರಿತು ಬೇಸರಗೊಂಡು ನುಡಿದರು. 
 
ರಾಜ್ಯ ಸರಕಾರ ನುಡಿದಂತೆ ಮೂರು ವರ್ಷ ಪಾರದರ್ಶಕ ಆಡಳಿತ ನೀಡಿದೆ. ಆದರೆ, ಈ ಕುರಿತು ಮಾರ್ಕೆಟಿಂಗ್ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಯಾವ ಸಾಧನೆಯು ಮಾಡದ ಪಕ್ಷಗಳು ವ್ಯಾಪಕ ಮಾರ್ಕೆಟಿಂಗ್ ಮಾಡುತ್ತಿವೆ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ