ಎನ್ ಐಎಗೆ ಸಿಸಿಬಿಯಿಂದ ಕೇಸ್ ವರ್ಗಾವಣೆ ಮಾಡಿದ್ದು,ಗ್ರೈನೇಡ್ ಸೇರಿದಂತೆ ಸ್ಪೋಟಕ ವಸ್ತುಗಳು ಸಂಗ್ರಹ ಮಾಡಿಕೊಂಡು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಪ್ಲಾನ್ ಮಾಡಲಾಗಿತ್ತು.ಜೈಲಿನಲ್ಲಿದ್ದುಕೊಂಡೇ ಶಂಕಿತ ಉಗ್ರ ನಾಸೀರ್ ನಿಂದ ಐವರು ಶಂಕಿತರಿಗೆ ಬ್ರೈನ್ ವಾಶ್ ಮಾಡಿದ.ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು,ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜು.1ರಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.ಶಂಕಿತರಾದ ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್‌ನನ್ನು ಸಿಸಿಬಿ ಬಂಧಿಸಿದ್ದರು.7 ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಜೈಲಿನಿಂದ ಕಸ್ಟಡಿಗೆ ಪಡೆದು ನಾಸೀರ್ ನ್ನ ಸಿಸಿಬಿ ವಿಚಾರಣೆ ನಡೆಸಿದ್ದಾರೆ.ಜೈಲಿನಲ್ಲಿ ನಾಸೀರ್ ಪೋನ್ ಬಳಸ್ತಿದ್ದದ್ದು ಪತ್ತೆಯಾಗಿದೆ.ಸದ್ಯ ಎನ್ ಐಎ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಪ್ರಾರಂಭ ಮಾಡಲಾಗಿದೆ.ವಿದೇಶದಲ್ಲಿ ತಲೆಮರೆಸಿಕೊಂಡಿರೋ ಶಂಕಿತ ಜುನೈದ್ ಗಾಗಿ ಶೋಧ ಮುಂದುವರೆಸಲಾಗಿದೆ.ಜೈಲಿನಲ್ಲಿರೋ ನಾಸೀರ್ ಸೇರಿ ಐವರನ್ನ ಕಸ್ಟಡಿಗೆ ಪಡೆಯಲು ಎನ್ ಐ ಎ ಸಿದ್ದತೆ ನಡೆಸಿದೆ.