ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿ ದುರಂತ- ಫ್ಯ್ಲಾಟ್​​ ಮಾಲೀಕ ಭೀಮಸೇನ್ ಪೊಲೀಸ್ ಠಾಣೆಗೆ ದೂರು

ಬುಧವಾರ, 22 ಸೆಪ್ಟಂಬರ್ 2021 (21:58 IST)
ಬೆಂಗಳೂರು: ದೇವರಚಿಕ್ಕನಹಳ್ಳಿಯ ಆಶ್ರಿತ್ 
ವಿವಿಧ.
ಮನೆ ಮಾಲೀಕರಿಗೆ ನೀಡಿದ ದೂರಿನನ್ವಯ ಬೇಗೂರು ಪ್ರಕರಣ ದಾಖಲಿಸಲಾಗಿದೆ, ಅಗ್ನಿ ಅನಾಹುತಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಜೊತೆಗೆ ಮಗಳು ಹಾಗೂ ತಾಯಿ ಸಾವನ್ನಪ್ಪಿದ್ದಾರೆ.
ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವಘಡಕ್ಕೆ ಕಾರಣ ಹುಡುಕಿ ತನಿಖೆ ನಡೆಸಲು ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ, ಅಗ್ನಿ ಅಪಘಾತ ಹಾಗೂ ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ.
ಅನಿಲ ಅಡುಗೆ ಸೋರಿಕೆಯಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ‌,  ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿಲ್ಲ. ಗ್ಯಾಸ್​ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ‌. ಮನೆ ಬಾಗಿಲು ಕಡೆಯಿಂದ ಬೆಂಕಿ ಹೊತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯಲ್ಲಿ ಅಗ್ನಿ ಕಾಣಿಸುತ್ತಿದ್ದಂತೆ ಆತಂಕಗೊಂಡು ಪತಿ ಭೀಮ್ ಸೇನ್ ರಿಗೆ ಪತ್ನಿ ಭಾಗ್ಯರೇಖಾ ಕರೆ ಮಾಡಿದ್ದರು. ಸಾಕಷ್ಟು ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆಯಿಂದ ಒಳಹೋಗಲೂ ಭೀಮ್ ಸೇನ್ ಅವರಿಗೆ ಸಾಧ್ಯವಾಗಿರಲಿಲ್ಲ. ಅಗ್ನಿಯ ಜ್ವಾಲೆ ಬಾಗಿಲು ಕಡೆಯಿದ್ದ ಕಾರಣ ಪತ್ನಿ ಭಾಗ್ಯರೇಖಾ ಅವರಿಗೆ ಹೊರಕ್ಕೆ ಬರಲು ಸಾಧ್ಯವಾಗಿಲ್ಲ.
ಹಲವು ಅನುಮಾನಗಳು ವ್ಯಕ್ತ:
ಅಗ್ನಿ ಅನಾಹುತಕ್ಕೆ ಕಾರಣಗಳನ್ನು ಪತ್ತೆ ಹಚ್ಚುತ್ತಿರುವ ಪೊಲೀಸರಿಗೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿವೆ. ಮನೆಯಲ್ಲಿ ಯುಪಿಎಸ್ ಇನ್​ವರ್ಟರ್ ಇದ್ದು, ಇದರ ಬ್ಯಾಟರಿಗಳು ಏನಾದರೂ ಸ್ಫೋಟಕ್ಕೆ ಕಾರಣವೇ? ಟಿವಿ, ಫ್ರಿಡ್ಜ್ ಎಲ್ಲವೂ ಆನ್ ಅಗಿದ್ದವು, ಅದರಿಂದಾಗಿ ಏನಾದರೂ ಸ್ಫೋಟ ಸಂಭವಿಸಿದೆಯಾ? ಹೀಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ.
ಅಗ್ನಿ ದುರಂತಕ್ಕೆ ಕಾರಣವಾಯ್ತಾ ರೂಲ್ಸ್ ಬ್ರೇಕ್?
ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಸುರಕ್ಷಿತ ಕ್ರಮ ಅಳವಡಿಸದೇ ಇರುವುದೇ ಎರಡು ಜೀವಗಳ ಬಲಿಗೆ ಕಾರಣವಾಯಿತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ‌. ಅಪಾರ್ಟ್ ಮೆಂಟ್ ಸುತ್ತಮುತ್ತ ಅಗ್ನಿಶಾಮಕ ವಾಹನ ಹೋಗುವಷ್ಟು ಜಾಗ ಇರಬೇಕು. ಪ್ರತಿ ಫ್ಲೋರ್ ನಲ್ಲಿ ಬೆಂಕಿ ನಂದಿಸುವ ಅಗ್ನಿನಂದಕ ಇರಬೇಕು. ತುರ್ತು ಸಂದರ್ಭಗಳಲ್ಲಿ ಅಗ್ನಿ ನಂದಿಸುವ ವಾಟರ್ ಲೈನ್ ವ್ಯವಸ್ಥೆ ಹಾಗೂ ಫೈರ್ ಆಲರಾಂ ಇರಬೇಕು. ಆದರೆ, ಅಪಾರ್ಟ್ ಮೆಂಟ್ ನಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ.
 
 
 
ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿಲ್ಲ:
ವಿಧಿವಿಜ್ಞಾನ ತಜ್ಞರು ಹಾಗೂ ಅಗ್ನಿಶಾಮಕದಳ, ಬೆಸ್ಕಾಂ ಅಧಿಕಾರಿಗಳು ಅವಘಡಕ್ಕೆ ನಿಖರ ಕಾರಣಗಳೇನು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸಿಲಿಂಡರ್ ಇರುವ ಹಾಗೆಯೇ ಇದೆ. ಹಾಗಾದರೆ ಶಾರ್ಟ್ ಸರ್ಕ್ಯೂಟ್​ನಿಂದ ದುರಂತ ಸಂಭವಿಸಿದೆಯಾ? ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದರ ಬಗ್ಗೆ ತಜ್ಞರು ಹಾಗೂ ಅಧಿಕಾರಿಗಳು ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ.
 
ಗ್ರೀಲ್ ಗಳ ತೆರವಿಗೆ ಅಸೋಸಿಯೇಷನ್ ​​ನಿರ್ಧಾರ: ಅವಘಡ ಹಿನ್ನೆಲೆ ಅಪಾರ್ಟ್ ಮೆಂಟ್ ನ ಎಲ್ಲ ಫ್ಲ್ಯಾಟ್ ಗಳಲ್ಲಿ ಅಳವಡಿರುವ ಗ್ರೀಲ್ ತೆರವು ಮಾಡಲು ನಿರ್ಧರಿಸಲಾಗಿದೆ. ದುರಂತ ವೇಳೆ ಗ್ರೀಲ್ ಮಹಿಳೆ ಸಾವಿಗೆ ಮುಳುವಾಗಿತ್ತು. ಗ್ರೀಲ್ ವಿರೋಧಿ ಮಹಡಿಯಿಂದ ಮಹಿಳೆಯರನ್ನು ಸ್ಥಳೀಯ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡುವ ಸಾಧ್ಯತೆಯಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ