ಪಡಿತರದಾರರಿಗೆ ಗುಡ್ ನ್ಯೂಸ್ ನೀಡಿದ ಆಹಾರ ಇಲಾಖೆ

ಶನಿವಾರ, 28 ಅಕ್ಟೋಬರ್ 2023 (15:20 IST)
ಆಹಾರ ಇಲಾಖೆ ಇಂದ ರಾಜ್ಯದ BPL ಕಾರ್ಡ್ ದಾರರಿಗೆ ಸಿಹಿ ಸುದ್ದಿ ಸರ್ಕಾರ ಕೊಟ್ಟಿದೆ.ಇನ್ಮುಂದೆ ಮನೆ ಬಾಗಿಲಿಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಬರಲಿದೆ.
 
ಆಂಧ್ರಪ್ರದೇಶ ಹಾಗೂ ದೆಹಲಿ ಮಾದರಿ ಯೋಜನೆ ಜಾರಿಯಾಗಲಿದೆ. 90 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಬರಲಿದೆ.ಈಗಾಗಲೇ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಇಲಾಖ ಆರಂಭ ಮಾಡಿದೆ.ಪ್ರಾಯೋಗಿಕ ಯಶಸ್ವಿ ಆದನಂತರ ರಾಜ್ಯದಲ್ಲಿ ಜಾರಿಯಾಗಲಿದೆ.ಮುಂದಿನ ತಿಂಗಳು ಮುಖ್ಯ ಮಂತ್ರಿ ಇಂದ ಅಧಿಕೃತವಾಗಿ ಲಾಂಚ್ ಆಗಲಿದೆ.ಈ ಯೋಜನೆಗೆ ಮೈಸೂರ್ ನಲ್ಲಿ ಮುಖ್ಯಮಂತ್ರಿ ಚಾಲನೆ ನೀಡುವ ಸಾಧ್ಯತೆ ಇದೆ ಹಾಗೂ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಲಾಂಚ್ ಮಾಡಲಾಗುತ್ತೆ 
.
 
ಇನ್ನು ಈ ಯೋಜನೆ ಮುಖ್ಯ ಉದ್ದೇಶ ಏನೆಂದ್ರೆ ರಾಜ್ಯದಲ್ಲಿ 90 ವರ್ಷ ಮೇಲ್ಪಟ್ಟರೀಗೆ  ನಡೆಯಲು ಶಕ್ತಿ ಇರುವುದಿಲ್ಲ
.ಹಾಗೆಯೇ ಇದ್ರಿಂದ ಅವರ ಪಾಲಿನ ಆಕ್ಕಿ ಮಧ್ಯವರ್ಥಿಗಳಿಗೆ ಸೇರುತ್ತಿದೆ ಹಾಗೆಯೇ ಅವರು ತಿಂಗಳು ಗಟ್ಟಲೆ ರೇಷನ್ ಪಡೆದಿರಲ್ಲ
.ಇದ್ರಿಂದ ಸರ್ಕಾರದ ನಿಯಮದಂತೆ 6 ತಿಂಗಳಿಂದ ಯಾರು ಆಹಾರ ಧಾನ್ಯ ಪಡೆದಿರಲ್ವೊ ಹಂತವರ ರೇಷನ್ ಕಾರ್ಡ್ ಅನ್ನು ಇಲಾಖೆ ಸಸ್ಪೆಂಡ್ ಮಾಡಾಲಾಗುತ್ತೆ.ಇದ್ರಿಂದ ಸಹ ಜನರಿಗೆ ತೊಂದ್ರೆ ಆಗಲಿದೆ.ಹಾಗೆಯೇ ಸರ್ಕಾರದ ಹಣ ಸಹ ಪೋಲು ಆಗುತ್ತಿದೆ.ಇದನೆಲ್ಲ ಮನಗಂಡ ಆಹಾರ ಇಲಾಖೆ ಇಂತ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.ರಾಜ್ಯದಲ್ಲಿ 90 ವರ್ಷ ಮೇಲ್ಪಟ್ಟವರಿಗೆ ಮನೆ ಮನೆಗೆ ಹೋಗಿ ರೇಷನ್ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ . ಮೊದಲು 90 ವರ್ಷ ಮೇಲ್ಪಟ್ಟರೀಗೆ ಆದ್ಯತೆ ಕೊಡಲಾಗಿದೆ. ಹಾಗೆಯೇ ನಂತರ 80 ವರ್ಷ ಹಾಗೂ 70 ವರ್ಷ ವಯಸ್ಸು ಆದವರಿಗೆ ವಿತರಣೆ ಮಾಡಲಿದೆ.ಇನ್ನು ಇದಕ್ಕೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿದೆ ಇಲಾಖೆ ಎಂದು ನೋಡುವುದಾದರೆ ರೇಷನ್ ಅಂಗಡಿಗೆ ಹೋಗಿ ರೇಷನ್ ಪಡೆಯುವ ಕ್ಷಮತೆ ಇರುವುದಿಲ್ಲ ಅವರಿಗೆ ಕೊಡಲಾಗುತ್ತೆ .ಅನ್ನ ಸುವೇದ ಎನ್ನುವ ಆಪ್ ನಲ್ಲಿ  ಪಾಸ್ವರ್ಡ್ ಹಾಗೂ ಲಾಗಿನ್ id ಸಹ ಇಲಾಖೆ ನೀಡಲಾಗುತ್ತೆ .ಅಲ್ಲಿ ಡೆಲಿವರಿ ಆದಮೇಲೆ ಫೋಟೋ ಅಪ್ಲೋಡ್ ಸಹ ಮಾಡಲಾಗುತ್ತೆ.ಆಪ್ ಅಲ್ಲಿ ಡೇಟಾ ಹಾಗೂ ಫೋಟೋಸ್ ಅಪ್ಲೋಡ್ ಮಾಡಬೇಕು.ಫೋಟೋ ಹಾಕಿದಮೇಲೆ ಸಿಸ್ಟಮ್ ಅಲ್ಲಿ ರಿಪ್ಲೇಕ್ಟ್ ಆಗುತ್ತೆ
.
ಈಗಾಗಲೇ ಸುಮಾರು 800 ಜನರಿಗೆ  ಡೆಲಿವರಿ ಮಾಡಲಾಗಿದೆ.ಈಗಾಗಲೇ ಫೋಟೋಸ್ ಹಾಗೂ ವಿಡಿಯೋ ಸಹ ಬರ್ತಿದೆ.ಒಳ್ಳೆ ರೆಸ್ಪೋನ್ಸ್ ಬರ್ತಿದೆ ಹಾಗೂ ಜನರು ಸಹ ಖುಷಿ ವ್ಯಕ್ತ ಪಡಿಸುತ್ತಿದ್ದಾರೆ.ರಾಜ್ಯದಲ್ಲಿ ಮೊದಲ ಸರಿ  ಡೋರ್ ಡೆಲಿವರಿ ನಡೆಯುತ್ತಿದೆ.ಜನ ಸಹ ಈ ಯೋಜನೆಗೆ ಖುಷ್ ಆಗಿದ್ದರೆ .ಈ ಯೋಜನೆಗೆ ಜನರಿಂದ ಕೂಡ ಪಾಸಿಟಿವ್ ರೆಸ್ಪೋನ್ಸ್ ಬಂದಿದೆ.ಅದೇ ರೆಸ್ಪೋನ್ಸ್ ನೋಡಿದಮೇಲೆ ಫುಲ್ ರಿಪೋರ್ಟ್ ಆಹಾರ ಇಲಾಖೆ ರೆಡಿಮಾಡಿದೆ.ಆ  ನಂತರ ಆ ರಿಪೋರ್ಟ್ ಅನ್ನು  ಸರ್ಕಾರಕ್ಕೆ ಕೊಡಲಾಗುತ್ತೆ .ಹೇಗೆ ಈ ಯೋಜನೆ ನಡೆಸಬೇಕು ಎಂದು ಸರ್ಕಾರಕ್ಕೆ ಕಳುಹಿಸಲಾಗಿದೆ.ಸರ್ಕಾರದ ಅನುಮತಿ ಗೆ ಕಾಯುತ್ತಿದ್ದೇವೆ.ಅಲ್ಲಿಂದ ಅನುಮತಿ ಸಿಕ್ಕಮೇಲೆ ರಾಜ್ಯಾಧ್ಯನಂತ ಜಾರಿ ಮಾಡೋಕೆ ಪ್ಲಾನ್ ನಡೆಸಿದೆ.
 
ಈ ಯೋಜನೆ ಮುಂದಿನ ತಿಂಗಳು ಜಾರಿ ಆಗುವ ಸಾಧ್ಯತೆ ಇದೆ.ಈಗಾಗಲೇ ಅಕ್ಟೋಬರ್ ತಿಂಗಳಲ್ಲಿ ಉಚಿತವಾಗಿ ಮನೆ ಮನೆಗೆ ರೇಷನ್ ಅಂಗಡಿ ಮಾಲೀಕರು ಡಿಲವರಿಮಾಡಿದ್ದಾರೆ.ಇಲಾಖೆ ಇಂದ ರೇಷನ್ ಅಂಗಡಿ ಮಾಲೀಕರೀಗೆ ರಿಕ್ವೆಸ್ಟ್ ಮಾಡಿ ಈ ತಿಂಗಳು ಫ್ರೀ ಆಗಿ ಮನೆ ಗೆ ಡೆಲಿವರಿ ಮಾಡಿ ಎಂದು ಹೇಳಿದ್ದಾರೆ.ಈಗಾಗಲೇ ಯಾವ ರೇಷನ್ ಅಂಗಡಿ ಮಾಲೀಕ್ರು ಮನಗೆ ಹೋಗಿರೇಷನ್ ವಿತರಣೆ ಮಾಡ್ತಾರೋ ಅವರಿಗೆ ಗೌರವ ಧನವನ್ನು ನೀಡಲು ಇಲಾಖೆ ಮುಂದಾಗಿದೆ.ಈಗಾಗಲೇ ಹಣಕಾಸು ಇಲಾಖೆ ಮುಂದೆ ಆಹಾರ ಇಲಾಖೆ ಬೇಡಿಕೆ ಇಟ್ಟಿದೆ.ಒಂದು ವೇಳೆ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ರೆ ಪ್ರತಿಯೊಂದು ಹೋಂ ಡೆಲಿವರಿ ಗೆ 50 ರೂಪಾಯಿ ನೀಡಲು ಇಲಾಖೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ