ಕನ್ನಡ ಕಲಿಯದ ಅನ್ಯ ರಾಜ್ಯದವರಿಗೆ ಬೆಂಗಳೂರಿಗೆ ಪ್ರವೇಶವಿ‌ಲ್ಲ: ಚರ್ಚೆಗೆ ಕಾರಣವಾದ ಪೋಸ್ಟ್‌

Sampriya

ಶನಿವಾರ, 25 ಜನವರಿ 2025 (19:29 IST)
Photo Courtesy X
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕಲಿಯದ ಉತ್ತರ ಭಾರತ ಹಾಗೂ ಇತರ ರಾಜ್ಯದವರಿಗೆ ಬೆಂಗಳೂರಿಗೆ ಪ್ರವೇಶವಿಲ್ಲ ಎನ್ನುವ ಪೋಸ್ಟ್‌ವೊಂದು ಚರ್ಚಗೆ ಕಾರಣವಾಗಿದೆ.

ಕನ್ನಡ ಕಲಿಯಲು ಇಷ್ಟಪಡದ ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳಿಗೆ ಬೆಂಗಳೂರು ಮುಚ್ಚಲಾಗಿದೆ. ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಲು ಸಾಧ್ಯವಾಗದಿದ್ದಾಗ ಅವರಿಗೆ ಬೆಂಗಳೂರು ಅಗತ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಉತ್ತರದವರು ಏಕೆ ಮೂಕರಾಗಿದ್ದಾರೆ! ನಿಮಗೆ ಕನ್ನಡವನ್ನು ಚೆನ್ನಾಗಿ ಕಲಿಯಲು ಇಷ್ಟವಿಲ್ಲದಿದ್ದರೆ ಕನ್ನಡ ನಾಡು ಬೆಂಗಳೂರಿಗೆ ಬರಬೇಡಿ ಎಂದು ಕಮೆಂಟ್ ಬಂದಿದೆ.

ಮತ್ತೊಬ್ಬರು ಬೆಂಗಳೂರು ಇಂದು ಬೆಳೆದಿದ್ದೆ ಕಠಿಣ ಪರಿಶ್ರಮದ ಜನರಿಂದ. ಈ ಬೆಳವಣಿಗೆ ದೇಶದ ಎಲ್ಲ ಪ್ರದೇಶಗಳ ಜನರ ಕೊಡುಗೆ ಇದೆ. ಈಗೇನು ಬೆಂಗಳೂರು ಬೆಳೆದು ನಿಂತಿದೆಯೋ ಅದಕ್ಕೆ ಕಾರಣರಾದವರನ್ನು ಮರೆಯಬೇಡಿ. ಇದನ್ನು ಸುಮ್ಮನೆ ನೋಡುತ್ತಾ ಕುಳಿತಿರುವ ಕನ್ನಡ ಹಾಗೂ ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ