ಕಾಡಾನೆ ದಾಳಿ, ವ್ಯಕ್ತಿ ಸ್ಥಿತಿ ಗಂಭೀರ
ಕಾಡಾನೆ ದಾಳಿಯಿಂದ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿರೋ ಘಟನೆ ಹಾಸನ ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 27 ವರ್ಷದ ತೀರ್ಥ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ವ್ಯಕ್ತಿ ಹೊಲದ ಬಳಿ ತೆರಳುತ್ತಿದ್ದಾಗ ಒಂಟಿಸಲಗ ಏಕಾಏಕಿ ದಾಳಿ ಮಾಡಿದೆ. ಗಾಯಾಳುವಿಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬೆಳಿಗ್ಗೆಯಿಂದಲೂ ವರ್ತಿಕೆರೆ, ಕಾಳತಮ್ಮನಹಳ್ಳಿ, ಮಾದಾಪುರ, ಮಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ ಸಲಗ ಸಂಚರಿಸುತ್ತಿದ್ದು, ಅಡಿಕೆ, ತೆಂಗು, ಜೋಳದ ಬೆಳೆಗಳನ್ನು ಕಾಡಾನೆ ತುಳಿದು ನಾಶ ಮಾಡಿದೆ. ಗ್ರಾಮಸ್ಥರು ಕಾಡಾನೆ ಕಂಡು ಭಯಭೀತರಾಗಿದ್ದಾರೆ. ಇದರ ಪರಿಣಾಮ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ.